More

    ಕುಂಟೋಜಿ ದಾಸರಿಂದ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ

    ಬೆಂಗಳೂರಿನ ಚಿಂಚೋಳಿ ಶ್ರೀನಿವಾಸಾಚಾರ್ ಹೇಳಿಕೆ

    ಕಂಪ್ಲಿ: ಶ್ರೀಶವಿಠ್ಠಲ ನಾಮಾಂಕಿತವುಳ್ಳ ಕುಂಟೋಜಿ ದಾಸರ ಸುಳಾದಿಗಳು ದಾಸ ಸಾಹಿತ್ಯಕ್ಕೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ ಎಂದು ಬೆಂಗಳೂರಿನ ಚಿಂಚೋಳಿ ಶ್ರೀನಿವಾಸಾಚಾರ್ ಹೇಳಿದರು.

    ಇಲ್ಲಿನ ಬ್ರಾಹ್ಮಣರ ಬೀದಿಯ ಕುಂಟೋಜಿ ದಾಸರ ಸದನದಲ್ಲಿ ಭಾನುವಾರ ಗುರು ಶ್ರೀಶವಿಠ್ಠಲ (ಕುಂಟೋಜಿದಾಸರ) 175ನೇ ಆರಾಧನೆ ನಿಮಿತ್ತ ಕುಂಟೋಜಿದಾಸರ ಕೀರ್ತನೆಗಳ ಉಪನ್ಯಾಸ ನೀಡಿ ಮಾತನಾಡಿದರು.

    ದಾಸರ ಸುಳಾದಿಯಲ್ಲಿ ಅಪಾರ ಅಂತಃಶಕ್ತಿ ಅಡಗಿದ್ದು, ಸುಳಾದಿಗಳ ಆಂತರ್ಯ ಅರಿಯುವಲ್ಲಿ ಮುಂದಾಗಬೇಕು. ಕುಂಟೋಜಿ ದಾಸರು ನಾನಾ ಲೀಲೆಗಳನ್ನು ತೋರಿದ್ದು ಭಗವಂತನ ಸಾಕ್ಷಾತ್ಕಾರಕ್ಕೆ ಸೋಪಾನವಾಗಿವೆ. ಆಚಾರ್ಯ ಗುರುಮಧ್ವರ ತತ್ವ ಪ್ರಮೇಯಗಳನ್ನು ಜನಮನಕ್ಕೆ ತಲುಪಿಸುವ ಸೇವಾಶ್ರೇಷ್ಠತೆಯನ್ನು ಗುರುತಿ, ಶ್ರೀಗುರು ಶ್ರೀಶವಿಠ್ಠಲ ಆರಾಧನಾ ಸೇವಾ ಸಮಿತಿಯಿಂದ, ಹೊಸಪೇಟೆಯ ಶ್ರೀನಿವಾಸ ಶೇಷಾಚಾರ್ ಪುರೋಹಿತರಿಗೆ ಶ್ರೀಗುರುಶ್ರೀಶ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರಾಧನಾ ನಿಮಿತ್ತ ಸುಪ್ರಭಾತ, ಕುಂಟೋಜಿ ದಾಸರ ಕೀರ್ತನೆ, ಹರಿಕಥಾಮೃತಸಾರ ಪಾರಾಯಣ, ಕುಂಟೋಜಿ ದಾಸರ ಭಾವಚಿತ್ರ ಮೆರವಣಿಗೆ ಮೊದಲಾದ ಕಾರ್ಯಕ್ರಮಗಳು ಜರುಗಿದವು. ಕೋಟೆ ಡಾ.ಧೀರಣ್ಣ ವೈದ್ಯರು ರಚಿಸಿದ ಭೂಗೋಳ-ಖಗೋಳ ಚಿಂತನೆಯ ಚಿತ್ರಪಟಗಳು, ನಾನಾ ದಾಸರ ಕಲಾಚಿತ್ರಗಳ ಪ್ರದರ್ಶನ ಜರುಗಿತು.

    ರಾಯಚೂರಿನ ಪ್ರಹ್ಲಾದಾಚಾರ್, ವಿಜಯಖಜಾನದಾರ್, ಋಗ್ವೇದಿ ಶ್ರೀನಿವಾಸಾಚಾರ್, ಡಾ.ಧೀರಣ್ಣ ವೈದ್ಯರು, ಪ್ರಸನ್ನ ವೈದ್ಯ, ಡಾ.ದಿಗ್ಗಾವಿ ಗುರುರಾಜಾಚಾರ್, ಜಿ.ಗೋಪಾಲಕೃಷ್ಣ, ಗುರುರಾಜ ಸೇವಾ ಮಂಡಳಿ, ಕೋಟೆಯ ಗುರುಶ್ರೀಶವಿಠ್ಠಲ ಭಜನಾಮಂಡಳಿ ಸೇರಿ ದಾಸರ ಸದ್ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts