More

    ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರ ಬೇಡಿಕೆ ಈಡೇರಿಸಿ

    ಕಂಪ್ಲಿ: ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳ ಈಡೇರಿಕೆ ಆದೇಶ ಹಿಂಪಡೆದಿರುವುದನ್ನು ವಿರೋಧಿಸಿ ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸಾಂಸ್ಕೃತಿಕ ವಿಭಾಗದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಇದನ್ನೂ ಓದಿರಿ: ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸಲು ಸಚಿವರಿಗೆ ಮನವಿ

    ಸಂಘದ ಉಪಾಧ್ಯಕ್ಷ ಎ.ಯಂಕಪ್ಪ ಮಾತನಾಡಿ, ವಿದ್ಯುತ್ ಕಾಮಗಾರಿಗಳನ್ನು ಒಂದರಿಂದ ಐದು ಲಕ್ಷ ರೂ.ವರೆಗೆ ತುಂಡು ಗುತ್ತಿಗೆ ನೀಡುವಂತೆ, ಪೂರ್ಣಗೊಂಡ ಎಲ್ಲ ಕಾಮಗಾರಿಗಳ ಬಿಲ್ ಶೀಘ್ರ ಪಾವತಿ ಸೇರಿ ಹದಿನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಕಲಬುರಗಿಯಲ್ಲಿ ಜು.24ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಆಗ ಅಲ್ಲಿನ ಶಾಸಕ ಅಲ್ಲಮಪ್ರಭು ಪಾಟೀಲ್ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಗುತ್ತಿಗೆದಾರರ ಬೇಡಿಕೆಗಳು ಸಮಂಜಸವಾಗಿದ್ದು ಈಡೇರಿಸುವಂತೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರಿಂದ ಆ ದಿನವೇ ಬೇಡಿಕೆ ಈಡೇರಿಕೆ ಆದೇಶ ಮಾಡಲಾಗಿತ್ತು.

    ಇಪ್ಪನ್ನಾಲ್ಕು ಗಂಟೆಗಳಲ್ಲಿ ಅಂದರೆ ಜು.25ರಂದು ಆದೇಶವನ್ನು ಜೆಸ್ಕಾಂ ತಾಂತ್ರಿಕ ನಿರ್ದೇಶಕರು ವಾಪಸ್ ಪಡೆದು ವಿದ್ಯುತ್ ಗುತ್ತಿಗೆದಾರರ ಬೇಡಿಕೆಗಳನ್ನು ತಳ್ಳಿ ಹಾಕಿದ್ದು ಅಕ್ಷಮ್ಯವಾಗಿದೆ. ಕೂಡಲೇ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ವಿದ್ಯುತ್ ಗುತ್ತಿಗೆದಾರರಾದ ಸಿ.ರಾಜಾ, ಸಿ.ಡಿ.ರಾಜಶೇಖರ, ಸಣ್ಣ ಬಾಲೇಸಾಬ್, ಎಚ್.ಚಂದ್ರಶೇಖರ, ಕೊಟ್ರೇಶ್, ಜಿ.ಸಿ.ನಾಗರಾಜ, ಜಿ.ರವಿತೇಜ, ರಾಗಿ ಪ್ರಶಾಂತ್, ಸಿ.ಡಿ.ಸುರೇಶ್, ಕೆ.ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts