More

    ಅಸಮಾನತೆ ತೊಲಗಿಸುವುದೇ ಲೋಹಿಯಾ ಚಿಂತನೆ

    ಕಂಪ್ಲಿ: ಸಮಾಜದಲ್ಲಿ ಅನಿಷ್ಟ ಪದ್ಧತಿ, ಅಸಮಾನತೆಯನ್ನು ತೊಲಗಿಸುವುದು ಲೋಹಿಯಾ ಅವರ ಚಿಂತನೆಯಾಗಿತ್ತು ಎಂದು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ ಹೇಳಿದರು.

    ಇಲ್ಲಿನ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿವಿಯ ಡಾ.ರಾಮಮನೋಹರ ಲೋಹಿಯಾ ಅಧ್ಯಯನ ಪೀಠ ಹಮ್ಮಿಕೊಂಡಿದ್ದ ಲೋಹಿಯಾ: ವಸಾಹತೋತ್ತರ ಚಿಂತನೆಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

    ಲೋಹಿಯಾ ಅವರು ಗಾಂಧೀಜಿ ಮತ್ತು ಅಂಬೇಡ್ಕರ್ ಚಿಂತನೆಗಳ ಹದ ಮಿಶ್ರಣದ ಪ್ರತೀಕವಾಗಿದ್ದರು. ಜಾತಿ ವ್ಯವಸ್ಥೆಯು ದಾಸ್ಯಕ್ಕೆ ಎಡೆಮಾಡಿಕೊಡುತ್ತದೆ. ಆಧುನಿಕತೆಯಿಂದ ಜಾತಿ ಪದ್ಧತಿ ವಿನಾಶಗೊಳ್ಳಲಿದೆ ಎಂದು ಲೋಹಿಯಾ ಆಲೋಚಿಸಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ಲೋಹಿಯಾ ಚಿಂತನೆಗಳಿಗೆ ಯುವಜನತೆ ಮಾರು ಹೋಗಿದ್ದರು ಎಂದು ತಿಳಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ವಿದ್ಯಾರ್ಥಿನಿಯರು ಮುಗ್ಧತೆಯನ್ನು ಜೀವನದುದ್ದಕ್ಕೂ ಕಾಪಾಡಿಕೊಳ್ಳಬೇಕು. ಅನೀತಿ, ದುಶ್ಚಟಗಳಿಗೆ ಬಲಿಯಾಗಬಾರದು. ಜೀವನದಲ್ಲಿ ಉನ್ನತ ವಿಚಾರಧಾರೆ, ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪ್ರಾಚಾರ್ಯ ಮಹಮ್ಮದ್ ಶಫಿ ಅಧ್ಯಕ್ಷತೆವಹಿಸಿದ್ದರು. ಡಾ.ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ಡಾ.ಯರ‌್ರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಉಪನ್ಯಾಸಕ ಶ್ರೀಪಾದರಾವ್ ಗುಮಾಸ್ತೆ, ಉಪನ್ಯಾಸಕರಾದ ಡಾ.ಎಂ.ಆರ್.ವಾಗೀಶ್, ಗಜೇಂದ್ರ, ಜಗದೀಶ್, ಷಣ್ಮುಖಪ್ಪ, ವಾಮದೇವ ಮೂರ್ತಿ, ವಿ.ಮುನಾವರ್, ನವೀದ್‌ಬಾಷಾ, ರಾಮಪ್ಪ, ನಿರಂಜನ, ಬಂಗಿ ಸರೋಜಾ, ಶಹಜಾನ್ ಸುಲ್ತಾನ್, ಎಫ್‌ಡಿಎ ವೀರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts