More

    ತ್ರಿಪದಿಯಿಂದ ಅಂಕು-ಡೊಂಕು ತಿದ್ದಿದ ಮಹನೀಯ

    ಕಂಪ್ಲಿ: ಜನಸಾಮಾನ್ಯರಲ್ಲಿ ಲೋಕದ ಅನುಭವಗಳನ್ನು ವಚನಗಳ ಮೂಲಕ ತಿಳಿಸುವಲ್ಲಿ ತೆಲುಗು ಭಾಷೆಯ ಯೋಗಿ ವೇಮನರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಗಂಗಾವತಿ ತಾಲೂಕು ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ ಹೇಳಿದರು.

    ತೆಲುಗು ಭಾಷೆಯಲ್ಲಿ ಯೋಗಿ ವೇಮನರು ಪ್ರಮುಖ

    ಪಟ್ಟಣದ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನಸಂಘ ಆಯೋಜಿಸಿದ್ದ ಮಹಾಯೋಗಿ ವೇಮನರ 612ನೇ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು. ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಮುಖ್ಯವಾಹಿನಿಗೆ ಕರೆತರುವಲ್ಲಿ ವೇಮನರು ಶ್ರಮಿಸಿದರು. ಅವರ ತ್ರಿಪದಿಗಳು ತೆಲುಗು ಭಾಷಾ ಸಾಹಿತ್ಯಕ್ಕೆ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದರು.
    ತಾಪಂ ಇಒ ಆರ್.ಕೆ.ಶ್ರೀಕುಮಾರ ಮಾತನಾಡಿ, ಮೊಬೈಲ್ ಸದುಪಯೋಗ ಕುರಿತು ಮಕ್ಕಳಲ್ಲಿ ಜಾಗೃತಿಗೊಳಿಸಬೇಕು. ಯುವಜನತೆ ದುಶ್ಚಟಗಳಿಂದ ದೂರವಿರಬೇಕು. ವೇಮನರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

    ಇದನ್ನೂ ಓದಿ: ನರೆಗಾ ಕಾಮಗಾರಿಯಲ್ಲಿ ಅಕ್ರಮ! 27 ಪಿಡಿಓ ಅಧಿಕಾರಿಗಳು ಸಸ್ಪೆಂಡ್​

    ತಹಸೀಲ್ದಾರ್ ಶಿವರಾಜ, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪಿಐ ಕೆ.ಬಿ.ವಾಸುಕುಮಾರ್, ಹೇಮ ವೇಮ ರೆಡ್ಡಿ ಜನ ಸಂಘದ ಸದಸ್ಯರಾದ ರಾಘವರೆಡ್ಡಿ, ಟಿ.ವಿ.ಸುದರ್ಶನ ರೆಡ್ಡಿ, ಕೆ.ಚಂದ್ರಶೇಖರ, ಎನ್.ಚಂದ್ರಕಾಂತ ರೆಡ್ಡಿ, ಇಟ್ಗಿ ಬಸವರಾಜಗೌಡ, ಶೇಖರಗೌಡ, ಗುತ್ತಿಗೆನೂರು ವೆಂಕಟರೆಡ್ಡಿ, ಡಾ.ಅಶೋಕ ಬಿ.ಹಂದ್ರಾಳ, ವೆಂಕಟೇಶ ರೆಡ್ಡಿ, ಹನುಮಂತ ರೆಡ್ಡಿ, ಮೆಟ್ರಿ ರಾಜಪ್ಪ, ಶಂಕರಗೌಡ, ಎಮ್ಮಿಗನೂರು ಜಡೇಶರೆಡ್ಡಿ, ಜಿ.ನಾಗರೆಡ್ಡಿ, ಹರೀಶ್‌ರೆಡ್ಡಿ, ನವೀನ್‌ರೆಡ್ಡಿ, ಚಂದ್ರಶೇಖರರೆಡ್ಡಿ, ಸದಾಶಿವರೆಡ್ಡಿ, ದುರ್ಗಾ, ಲೋಕೇಶರೆಡ್ಡಿ ಸೇರಿ ರೆಡ್ಡಿ ಇನ್ನಿತರರಿದ್ದರು.

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತ್ಯುತ್ಸವಕ್ಕೆ ತಹಸೀಲ್ದಾರ್ ಶಿವರಾಜ ಚಾಲನೆ ನೀಡಿ ಮಾತನಾಡಿ, ವೇಮನರ ವಚನಗಳು ಲೌಕಿಕ ಜೀವನದಲ್ಲಿ ಪಾರಮಾರ್ಥವನ್ನು ಸಾಧಿಸುವ ಬಗೆಯನ್ನು ಪ್ರೇರೇಪಿಸುತ್ತವೆ. ಕಾಯಕ ತತ್ವಕ್ಕೆ ಮಹತ್ವ ನೀಡಿದ ವೇಮನರು ಲೌಕಿಕ ಸುಖ ನಶ್ವರವಾಗಿದೆ ಎಂದು ತಿಳಿಸಿಕೊಟ್ಟರು. ಮನುಷ್ಯರು ಆಸೆಗಳಿಂದ ವಿಮುಖರಾಗಲಿ ಎಂಬುದು ಅವರ ಆಶಾಯವಾಗಿತ್ತು ಎಂದರು. ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ರೆಡ್ಡಿ ಸಮುದಾಯದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts