More

    ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಲೋಕಾಯುಕ್ತ ಎಸ್‌ಪಿ ಪುರುಷೋತ್ತಮ ಸೂಚನೆ

    ಕಂಪ್ಲಿ: ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಬಳ್ಳಾರಿಯ ಕರ್ನಾಟಕ ಲೋಕಾಯುಕ್ತರಿಂದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.

    ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳದ ಕಾರಣ ಸಂವಾದ ಕಾರ್ಯಕ್ರಮವನ್ನಾಗಿ ಪರಿವರ್ತಿಸಲಾಯಿತು.

    ಲೋಕಾಯುಕ್ತ ಎಸ್‌ಪಿ ಪುರುಷೋತ್ತಮ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ಆರೋಗ್ಯ, ಶಿಕ್ಷಣ ಸೇರಿ ಎಲ್ಲ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಭ್ರಷ್ಟಾಚಾರ ರಹಿತವಾಗಿ ಸಕಾಲಕ್ಕೆ ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
    ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳ ಲಭ್ಯತೆ ಮತ್ತು ಕೊರತೆ ಕುರಿತು ವಿಚಾರಿಸಿದರು. ಬ್ಲಡ್ ಬ್ಯಾಂಕ್ ತೆರೆಯಲು ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿ ರಾಧಿಕಾಗೆ ಸೂಚಿಸಿದರು.

    ನಕಲಿ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾವಳಿ ಸಂಪೂರ್ಣ ತಡೆಯಬೇಕಿದೆ. ಕೃಷಿ, ತೋಟಗಾರಿಕೆ ಇಲಾಖೆಗಳಿಂದ ದೊರಕುವ ಸೌಲಭ್ಯಗಳನ್ನು ರೈತರಿಗೆ ತಿಳಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ನಜೀರ್ ಅಹ್ಮದ್ ಅವರಿಗೆ ಸೂಚನೆ ನೀಡಿದರು.

    ಪುರಸಭೆ ಚೆನ್ನಾಗಿದ್ದರೆ ಊರು ಚೆನ್ನಾಗಿರಲು ಸಾಧ್ಯ ಎಂದ ಅವರು, ಖಾತೆ ಮಾಡಿಕೊಡುವಲ್ಲಿ ಅರ್ಜಿದಾರರನ್ನು ಪೀಡಿಸಬಾರದು. ರೋಗ ನಿವಾರಣೆಯಲ್ಲಿ ಚರಂಡಿ ಪಾತ್ರ ಪ್ರಮುಖವಾಗಿದ್ದು, ಮಳೆಗಾಲ ಮುನ್ನವೇ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಅವರಿಗೆ ಸಲಹೆ ನೀಡಿದರು. ಸಿಬ್ಬಂದಿ ಕೊರತೆ ಕುರಿತು ಮಾಹಿತಿ ಪಡೆದುಕೊಂಡರು.

    ಜಂಗಲ್‌ಕಟಿಂಗ್, ರಸ್ತೆಗೆ ಮಣ್ಣು ಹಾಕುವುದು ಸೇರಿ ಕೆಲ ಕಾಮಗಾರಿಗಳನ್ನು ನೆರವೇರಿಸದೆ ಹಣ ಲಪಟಾಯಿಸುವವರ ವಿರುದ್ಧ ಕಣ್ಣಿಡಲಾಗಿದೆ. ಗುಣಮಟ್ಟದ ಕಾಮಗಾರಿ ಇಲ್ಲದಿದ್ದಲ್ಲಿ, ಕೆಲಸ ಮಾಡದೆ ಬಿಲ್ ಮಾಡಿದಲ್ಲಿ ಪಿಡಿಒ ಹೊಣೆಗಾರರಾಗಲಿದ್ದಾರೆ. ಪಿಡಿಒ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು.

    ಮಕ್ಕಳಿಗೆ ಶುಚಿಯಾದ ಗುಣಮಟ್ಟದ ಆಹಾರ ಪೂರೈಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸಬೇಕು. ಶೌಚಗೃಹ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಂಗೆ, ಉಪ ನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಉಪಟಳ ಇಲ್ಲದಂತೆ ನಿಗಾವಹಿಸಬೇಕು. ಸೂಕ್ತ ದಾಖಲೆಗಳಿದ್ದರೂ ಪರಿಶೀಲಿಸಿ ನ್ಯಾಯಯುತ ಸೇವೆ ಸಲ್ಲಿಸಬೇಕು ಎಂದು ಉಪನೋಂದಣಾಧಿಕಾರಿ ಚಂದ್ರಕಾಂತ್‌ಗೆ, ಕ್ಷೇತ್ರ ಸಂಚಾರ ಕೈಗೊಂಡು ಲಸಿಕೆ ನೀಡುವಂತೆ ಡಾ.ಕೆ.ಯು.ಬಸವರಾಜ್, ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಜೆಸ್ಕಾಂ ಕಾರ್ಯನಿರ್ವಹಿಸುವಂತೆ ಜೆಸ್ಕಾಂ ಎಇಇ ಉಮೇಶ್‌ಕುಮಾರ್‌ಗೆ ಸೂಚನೆ ನೀಡಿದರು. ಬಳ್ಳಾರಿ ಲೋಕಾಯುಕ್ತ ಎಸ್‌ಪಿ ಪುರುಷೋತ್ತಮ ಅಧ್ಯಕ್ಷತೆವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts