More

    ಬಲವಂತವಾಗಿ ರೈತ ವಿರೋಧಿ ಕಾಯ್ದೆ ಹೇರಿಕೆ; ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಆಕ್ರೋಶ

    ಕಂಪ್ಲಿ: ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ಕಿತ್ತು ಜೆಸ್ಕಾಂ ಕಚೇರಿಗೆ ಒಪ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಹೇಳಿದರು.

    ಇಲ್ಲಿನ ಅತಿಥಿಗೃಹದಲ್ಲಿ ತಾಲೂಕು ಘಟಕದ ರೈತ ಮುಖಂಡರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಸಲ್ಲದು. ಕೇಂದ್ರ, ರಾಜ್ಯಸರ್ಕಾರಗಳು ರೈತ ಮತ್ತು ಜನವಿರೋಧಿ ನೀತಿ ಅನುಸರಿಸುತ್ತಿವೆ. ರಾಜ್ಯದಲ್ಲಿ ಕೃಷಿಯನ್ನು ದುರ್ಬಲಗೊಳಿಸಿ ಕೃಷಿಕನನ್ನು ಒಕ್ಕಲೆಬ್ಬಿಸಲೆಂದೇ ರೈತ ವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ, ವಿದ್ಯುತ್ ಖಾಸಗೀಕರಣ ಸೇರಿ ರೈತ ವಿರೋಧಿ ಕಾಯ್ದೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಕಳಪೆ ಬಿತ್ತನೆ ಬೀಜ, ದುಬಾರಿ ರಸಗೊಬ್ಬರ ಹಾವಳಿಯನ್ನು ಸರ್ಕಾರ ನಿಯಂತ್ರಿಸದೇ, ಬೆಂಬಲ ಬೆಲೆ ನೀಡದೆ, ಖರೀದಿ ಕೇಂದ್ರ ತೆರೆಯದೆ ರೈತರನ್ನು ಹತ್ತಿಕ್ಕಲಾಗುತ್ತಿದೆ. ಇದರ ವಿರುದ್ಧ ಸೆ.12ರಂದು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಟಿಸಿ ಸುಟ್ಟರೆ ರೈತರಿಂದ ಜೆಸ್ಕಾಂ ಸಿಬ್ಬಂದಿ ಹಣ ವಸೂಲಿ ಮಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

    ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ವಿ.ಟಿ.ನಾಗರಾಜ, ಡಿ.ಮುರಾರಿ, ಟಿ.ವಿರುಪಣ್ಣ, ಕೆ.ಸುದರ್ಶನ, ಬಿ.ಮಂಜುನಾಥ, ಎಂ.ಮಂಜುನಾಥ, ಬಿ.ಕೆ.ದೇವೇಂದ್ರಪ್ಪ, ಕೆ.ಪೆದ್ದಣ್ಣ, ಎಚ್.ಎಂ.ಚನ್ನಯ್ಯಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts