More

    ಬೋನಿಗೆ ಸೆರೆಯಾದ ಚಿರತೆ

    ದೂರವಾದ ಆತಂಕ ರೈತರು, ನಾಗರಿಕರು ನಿರಾಳ

    ಕಂಪ್ಲಿ: ತಾಲೂಕಿನ ದೇವಸಮುದ್ರ ಕ್ರಾಸ್‌ನ ಕಣವಿ ತಿಮ್ಮಲಾಪುರ ರಸ್ತೆಯ ಕೋಳಿಫಾರಂ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಭಾನುವಾರ ಬೆಳಗ್ಗೆ ಚಿರತೆ ಸೆರೆಯಾಗಿದೆ.

    ಒಂದು ವಾರದಿಂದ ದೇವಸಮುದ್ರ ಕ್ರಾಸ್ ಪಕ್ಕದಲ್ಲಿನ ಗುಡ್ಡದಂಚಿನ ಆಸುಪಾಸಿನಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಗ್ರಾಮದ ರೈತರು, ಕೂಲಿ ಆಳುಗಳು ಹೊಲ ಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಅರಣ್ಯ ಇಲಾಖೆ ಬೋನು ಅಳವಡಿಸಿ, ಚಿರತೆಯನ್ನು ಸೆರೆ ಹಿಡಿದು ದೂರ ಸಾಗಿಸಬೇಕೆಂದು ದೇವಸಮುದ್ರ ತಾಪಂ ಸದಸ್ಯ ಕೆ.ಷಣ್ಮುಖಪ್ಪ, ದೇವಸಮುದ್ರ ಗ್ರಾಮಾಡಳಿತ ಒತ್ತಾಯಿಸಿತ್ತು.

    ಅಲ್ಲದೆ, ಸಾರ್ವಜನಿಕರಲ್ಲಿ ಚಿರತೆಯ ಚಲನವಲನ ಕುರಿತು ಜಾಗೃತಿ ಮೂಡಿಸಲು ಗ್ರಾಮಾಡಳಿತ ಕರಪತ್ರ ವಿತರಿಸಿ, ಡಂಗುರ ಸಾರಿಸಲಾಗಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ದೂರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts