More

    ಸ್ವಚ್ಛತೆಯಲ್ಲಿ ಗ್ರಾಮಸ್ಥರ ಪಾತ್ರ ಪ್ರಮುಖ, ತಹಸೀಲ್ದಾರ್ ಗೌಸಿಯಾಬೇಗಂ ಅಭಿಮತ

    ಕಂಪ್ಲಿ: ಗ್ರಾಮ ಸ್ವಚ್ಛತೆ ಇಟ್ಟುಕೊಳ್ಳುವಲ್ಲಿ ಗ್ರಾಮಸ್ಥರ ಪಾತ್ರ ಪ್ರಮುಖ ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು.

    ಬೆಳಗೋಡ್‌ಹಾಳ್‌ನಲ್ಲಿ ಶುಕ್ರವಾರ ‘ಗ್ರಾಮ ವಾಸ್ತವ್ಯ-ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಸ್ಥರು ಭಿನ್ನಾಭಿಪ್ರಾಯಗಳನ್ನು ತೊರೆದು ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಬದ್ಧರಾಗಬೇಕು. ಗ್ರಾಮ ವಾಸ್ತವ್ಯದಲ್ಲಿ ಎಂಟು ಅರ್ಜಿ ಆಹಾರ ಇಲಾಖೆ, 14 ಕಂದಾಯ, ಮೂರು ಜೆಸ್ಕಾಂ, 20 ಗ್ರಾಮಾಡಳಿತ, ಆರು ಸಾರಿಗೆ, ತಲಾ ಒಂದೊಂದು ಅರ್ಜಿಗಳು ನೀರಾವರಿ, ಸಾರಿಗೆ, ಕೃಷಿ, ಶಿಕ್ಷಣ, ಅರಣ್ಯ ಸೇರಿ ಒಟ್ಟು 56ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಲ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದೆ. ಬೆಳಗೋಡ್‌ಹಾಳ್-ಕಂಪ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಮರು ಚಾಲನೆಗೊಳಿಸಲಾಗುವುದು ಎಂದರು.

    ತಾಪಂ ಇಒ ಮೊಹಮ್ಮದ್ ಖಿಜರ್ ಮಾತನಾಡಿದರು. ಇದಕ್ಕೂ ಮುನ್ನ ತಹಸೀಲ್ದಾರ್ ನೇತೃತ್ತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಬೆಳಗೋಡ್‌ಹಾಳ್ ಗ್ರಾಮದ ಮನೆಮನೆಗೂ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಗ್ರಾಪಂ ಉಪಾಧ್ಯಕ್ಷ ಸಿ.ದುರುಗಪ್ಪ, ಸದಸ್ಯರಾದ ಬಳ್ಳಾರಿ ಮಾಧವ, ಎಸ್.ಚಂದ್ರಶೇಖರಗೌಡ, ಪ್ರಮುಖರಾದ ವಿಪ್ರದ್ ಭೀಮೇಶ್, ಮೌಲಾಸಾಬ್, ಕೆ.ರಾಜಾ, ಟಿ.ದೇವಪ್ಪ, ಕೆ.ಎಸ್.ಮಲ್ಲನಗೌಡ, ಡಿಟಿ ರವೀಂದ್ರಕುಮಾರ್, ದ್ರೌಪತಿ, ಜಾವೇದ್ ಖುರೇಷಿ, ಲಕ್ಷ್ಮಣನಾಯ್ಕ, ಜಿಲಾನ್, ಟಿ.ಗಿರೀಶ್‌ಬಾಬು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts