More

    ಕಂಪ್ಲಿಯಲ್ಲಿ ಜೋಡಿ ಮಡಿ ರಥೋತ್ಸವ

    ಕಂಪ್ಲಿ: ಪಟ್ಟಣದ ಆರಾಧ್ಯದೈವ ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಡಿ ರಥೋತ್ಸವ ಸೋಮವಾರ ನಸುಕಿನ ಜಾವ 5.30ಕ್ಕೆ ಭಕ್ತರ ಸಮ್ಮುಖದಲ್ಲಿ ಸಾಂಕೇತಿಕವಾಗಿ ನಡೆಯಿತು.

    ಕರೊನಾ ಹೊಸ ತಳಿ ಒಮಿಕ್ರಾನ್ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಜೋಡಿ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವಗಳನ್ನು ಸಾರ್ವಜನಿಕವಾಗಿ ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಸುಕಿನಜಾವ ತೇರಿನ ಮನೆಯಿಂದ ದೇವಸ್ಥಾನ ತನಕ ಜೋಡಿ ಮಡಿ ರಥಗಳನ್ನು ಎಳೆಯಲಾಯಿತು.

    ಭಕ್ತರು ಉತ್ತತ್ತಿ, ಹೂ ಪತ್ರಿಗಳನ್ನು ರಥದ ಕಳಸಗಳಿಗೆ ಎಸೆದು ಭಕ್ತಿ ಸಮರ್ಪಿಸಿದರು. ಶಾಸಕ ಜೆ.ಎನ್.ಗಣೇಶ್, ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಮಂಡಳಿ ಅಧ್ಯಕ್ಷ ಡಿ.ವೀರಪ್ಪ, ಪದಾಧಿಕಾರಿಗಳಾದ ಜೌಕೀನ್ ಸತೀಶ್, ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ ಇತರರು ಪಾಲ್ಗೊಂಡಿದ್ದರು. ನಂತರ ಭಕ್ತರು ಜೋಡಿ ರಥಗಳಿಗೆ ಪೂಜೆ ಸಲ್ಲಿಸಿ ಹಣ್ಣುಕಾಯಿ, ಹೋಳಿಗೆ ನೈವೇದ್ಯ ಅರ್ಪಿಸಿದರು. ಕಳೆದ ವರ್ಷವೂ ಕರೊನಾ ಹಿನ್ನೆಲೆಯಲ್ಲಿ ರಥೋತ್ಸವ ರದ್ದುಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts