More

    ಪಕ್ಷಿಗಳಿಗಾಗಿ ನೀರಿಟ್ಟ ಕಂಪ್ಲಿ ಶಾಲಾ ಚಿಣ್ಣರು

    ಕಂಪ್ಲಿ: ಬಿರು ಬೇಸಿಗೆ ಆರಂಭವಾಗಿದ್ದು, ಪಕ್ಷಿಗಳ ಬಾಯಾರಿಕೆ ತೀರಿಸಲು ಇಲ್ಲಿನ ಮಾರುತಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ನೀರೊದಗಿಸಲು ಮುಂದಾಗಿದ್ದಾರೆ.

    ವಾರದ ಹಿಂದೆ ಶಿಕ್ಷಕ ನಾಯ್ಕರ ರುದ್ರಪ್ಪ ನಾಲ್ಕು, ಐದನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಪಾಠ ಮಾಡುವಾಗ, ಮಕ್ಕಳು ನಮಗೆ ದಾಹವಾದಂತೆ ಪ್ರಾಣಿ-ಪಕ್ಷಿಗಳಿಗೆ ಬಾಯಾರಿಕೆ ಆದರೆ ನೀರಿಗಾಗಿ ಏನು ಮಾಡುತ್ತವೆ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಕೂಸಿನ ಮನೆಗೆ ಬರಲಿದ್ದಾರೆ 1203 ಚಿಣ್ಣರು -ಜಿಲ್ಲಾದ್ಯಂತ 64 ಕೇಂದ್ರಗಳ ಗುರುತು – ಕಾರ್ಯಾರಂಭಕ್ಕೆ ದಾವಣಗೆರೆ ಜಿಪಂ ಸಜ್ಜು 

    ನೀರನ್ನು ಅರಸಿ ಹೋಗುತ್ತವೆ. ಮನೆ ಮುಂದೆ, ಮರಗಿಡಗಳಲ್ಲಿ ನೀರು ಕಾಳಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುವ ಶಿಕ್ಷಕರ ಉತ್ತರ ಕೇಳಿ ನಾಲ್ಕು, ಐದನೇ ತರಗತಿ ಮಕ್ಕಳು ಬಿಸಾಡಬಹುದಾದ ವಾಟರ್ ಬಾಟಲ್‌ಗಳನ್ನು ಅರ್ಧ ಕತ್ತರಿಸಿ, ನೀರು ತುಂಬಿಸಿ ಗಿಡ ಮರಗಳಿಗೆ ನೇತು ಹಾಕುತ್ತಿದ್ದಾರೆ. ಐದಾರು ದಿನಗಳಿಂದ ಅಲ್ಲಲ್ಲಿ ಕಾಳು ಹಾಕಿ ಆಹಾರ ಒದಗಿಸಲು ಮುಂದಾಗಿದ್ದಾರೆ.

    ಬೆಳಗ್ಗೆ ನೀರು ಹಾಕಿದರೆ ಸಂಜೆ ಹೊತ್ತಿಗೆ ಖಾಲಿಯಾಗುತ್ತದೆ. ಗುಬ್ಬಿ, ಕಾಗೆ ಕೆಲ ಪಕ್ಷಿಗಳು ಬಂದು ನೀರು ಕುಡಿದು ಹೋಗುತ್ತವೆ. ಇದನ್ನು ನೋಡಿ ನಮಗೆ ಸಂತಸವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ವಿನುತಾ, ಕೃಷ್ಣ, ಹೇಮಂತ್, ಗಣೇಶ, ಕಾವ್ಯಾ, ತನುಶ್ರೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts