More

    ಬಲಿಜ ಸಮುದಾಯವನ್ನು 2ಎ ಮೀಸಲಿಗೆ ಸೇರಿಸಿ

    ಕಂಪ್ಲಿ: ಬಲಿಜ ಸಮುದಾಯವನ್ನು ರಾಜ್ಯ ಸರ್ಕಾರ 2ಎ ಮೀಸಲಿಗೆ ಸೇರಿಸಬೇಕೆಂದು ರಾಮಸಾಗರ ಬಲಿಜ ಸಮಾಜ ಸಂಘದ ಅಧ್ಯಕ್ಷ ಜಿ.ಕೆ.ವಾಮದೇವಪ್ಪ ಒತ್ತಾಯಿಸಿದರು.

    ತಾಲೂಕಿನ ರಾಮಸಾಗರ ಗ್ರಾಮದ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಕೈವಾರ ಯೋಗಿನಾರೇಯಣ ಯತೀಂದ್ರರ 297ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ರಾಮಸಾಗರದಲ್ಲಿ ಬಲಿಜ ಸಮುದಾಯ ಭವನ ಮತ್ತು ಯೋಗಿ ನಾರೇಯಣ ಯತೀಂದ್ರ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ನೀಡುವಲ್ಲಿ ಗ್ರಾಮಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಹುಡೇದ ಪರಶುರಾಮ, ಬಿ.ಎಂ.ಲೋಕೇಶ್, ಭರತ್, ಜೆ.ಶರಣಪ್ಪ, ಸಿಬ್ಬಂದಿ ಜಿ.ಹನುಮಂತಪ್ಪ, ಸೋಮಶೇಖರ್, ಅಂಬಿಕಾ, ಕೆ.ಪಂಪಾಪತಿ ಇತರರಿದ್ದರು.

    ತಾಲೂಕು ಕಚೇರಿ: ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಯೋಗಿ ನಾರೇಯಣ ಯತೀಂದ್ರರ 297ನೇ ಜಯಂತ್ಯುತ್ಸವದಲ್ಲಿ ಕಂಪ್ಲಿ ಬಲಿಜ ಸಂಘದ ನಗರ ಅಧ್ಯಕ್ಷ ಕವಿತಾಳ ಬಸವರಾಜ ಮಾತನಾಡಿ, ಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನ ನೀಡುವ ಮೂಲಕ ಲೋಕೋಪಕಾರ ಮಾಡಿದ್ದಾರೆ ಎಂದರು.
    ಯತೀಂದ್ರರು ಸಮಾಜ ಸುಧಾರಕರಾಗಿದ್ದು, ಸಮಾನತೆ ಬೋಧಿಸಿದರು. ಮನೆಯಲ್ಲಿ ಮನಃಶಾಂತಿ ನೆಲೆಸಲು ವಾದ ಮಾಡದಿರುವಂತೆ, ಪರಿಸರ ಪ್ರಜ್ಞೆ ಮೂಡಿಸಿಕೊಳ್ಳುವಂತೆ ತಾತಯ್ಯನವರು ಉಪದೇಶಿಸಿದ್ದು ಸದಾ ಆದರ್ಶವಾಗಿವೆ ಎಂದರು.

    ಶಿರಸ್ತೇದಾರ್ ಎಸ್.ಡಿ.ರಮೇಶ್, ಬಲಿಜ ಸಮಾಜದ ಪ್ರಮುಖರಾದ ಇಂಗಳಗಿ ನಾರಾಯಣ, ಕೆ.ಶಂಕರ್, ಕೆ.ಲಕ್ಷ್ಮೀನಾರಾಯಣ, ಎಂ.ರಮೇಶ್, ಎನ್.ಲಿಂಗಪ್ಪ, ಆರ್.ತಿರುಮಲದೇವರಾಯ, ಡಿ.ಶ್ರೀನಿವಾಸ್, ಕೆ.ಅನಿಲ್, ಮಹಿಳಾ ಬಲಿಜ ಸಂಘದ ಅಧ್ಯಕ್ಷೆ ಶಾರದಮ್ಮ ಲೋಕೇಶ್, ಪದಾಧಿಕಾರಿಗಳಾದ ಸಾವಿತ್ರಮ್ಮ, ಸುನಂದಾ, ಪದ್ಮಾವತೆಮ್ಮ, ಆರತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts