More

    ಮಂಡ್ಯದ ಗಂಡಿಗೆ ಒಲಿಯಿತು ಮತ್ತೊಂದು ಗರಿಮೆ!

    ಬೆಂಗಳೂರು: ಸ್ವಂತ ಹಣದಲ್ಲಿ 16 ಕೆರೆಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ಕುಡಿವ ನೀರೊದಗಿಸುತ್ತಿರುವ, ಅಂತರ್ಜಲ ವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ, ಬೆಟ್ಟದ ತಪ್ಪಲಿನಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ಮೆರೆದ ಮಂಡ್ಯದ ಗಂಡು ಕಾಮೇಗೌಡ ಅವರು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಚಿರಪರಿಚಿತ.

    ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕೆಲಸದಲ್ಲಿ ಮಗ್ನರಾಗಿರುವ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರನ್ನು ಜು.28ರಂದು ನಡೆದ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದರು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶಿಷ್ಟ ರೀತಿಯಲ್ಲಿ ಕಾಮೇಗೌಡರನ್ನು ಗೌರವಿಸಿದೆ. ಇದನ್ನೂ ಓದಿರಿ ಸಗಣಿ-ಗಂಜಲ ಬಳಸಿದ್ರೆ ಕೋವಿಡ್​ ಬರಲ್ಲ! 

    ಮಂಡ್ಯದ ಗಂಡಿಗೆ ಒಲಿಯಿತು ಮತ್ತೊಂದು ಗರಿಮೆ!‘ಆಧುನಿಕ ಭಗೀರಥ’, ‘ಕೆರೆಗಳ ಮನುಷ್ಯ’ ಎಂದೇ ಹೆಸರುವಾಸಿಯಾಗಿರುವ ಕಾಮೇಗೌಡರ ಅನನ್ಯ ಪರಿಸರ ಕಾಳಜಿ ಮತ್ತು ಸಾಧನೆಯನ್ನು ಪರಿಗಣಿಸಿದ
    ರಾಜ್ಯ ಸರ್ಕಾರ, ಕಾಮೇಗೌಡರಿಗೆ ಜೀವಿತಾವಧಿಯವರೆಗೆ ‘ಉಚಿತ ಬಸ್ ಪಾಸ್‌’ ನೀಡಲು ಆದೇಶಿಸಿದೆ.

    ಅದರಂತೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲ ಮಾದರಿಯ ಬಸ್​ಗಳಲ್ಲಿ ಕಾಮೇಗೌಡರು ಜೀವಿತಾವಧಿಯವರೆಗೂ ಉಚಿತವಾಗಿ ಸಂಚರಿಸಲು ಬಸ್ ಪಾಸ್​ ನೀಡಲಾಗುತ್ತಿದೆ ಎಂದು ಕೆಎಸ್ಆರ್​ಟಿ‌ಸಿ ವ್ಯವಸ್ಥಾಪಕ‌ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

    85 ವರ್ಷ ವಯಸ್ಸಿನ ಕಾಮೇಗೌಡರು ಕುಂದೂರು ಬೆಟ್ಟದ ತಪ್ಪಲಿನಲ್ಲಿ ಕೆರೆಗಳನ್ನು ನಿರ್ಮಿಸಿದ್ದು, ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡುವಲ್ಲಿ ಅವರು ಹಂಬಲಿಸುತ್ತಿದ್ದಾರೆ. ಈ ಬಗ್ಗೆ ಅವರೇ ಇತ್ತೀಚೆಗೆ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದನ್ನು ಸ್ಮರಿಸಬಹುದು.

    ವಿಧಾನಸೌಧ ಬಳಿ ಅಪಘಾತ, ಎಎಸ್ಐ ಸೇರಿ ನಾಲ್ವರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts