More

    ಏಳು ವರ್ಷಗಳ ಹಿಂದೆಯೇ ಇಂಥದ್ದೊಂದು ಪ್ರಯತ್ನ ಮಾಡಿದ್ದರು ಕಮಲ್!

    ಎಲ್ಲಿ ನೋಡಿದರೂ ಓವರ್ ದಿ ಟಾಪ್‌ಗಳದ್ದೇ ಮಾತು (ಓಟಿಟಿ). ಅದರಲ್ಲೂ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ರದ್ದಾಗಿ, ಜನರ ಮನರಂಜನೆಯ ಕಥೆ ಏನು ಎಂದಾಗ, ಹಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳವರು ಹೊಸ ಚಿತ್ರಗಳನ್ನು ಚಿತ್ರಮಂದಿರಕ್ಕಿಂತ ಮುಂಚೆ, ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಇದರ ಬಗ್ಗೆ ಪರ-ವಿರೋಧ ನಡೆಯುತ್ತಲೇ ಇದೆ. ಕೆಲವರು ಸಣ್ಣ ಚಿತ್ರಗಳಿಗೆ ಇದೊಳ್ಳೆಯ ಬೆಳವಣಿಗೆ ಎಂದರೆ, ಇದರಿಂದ ಚಿತ್ರಮಂದಿರಗಳಿಗೆ ಸಾಕಷ್ಟು ಸಮಸ್ಯೆಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ಪ್ರೀತಿಯ ಪುತ್ರಿ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್​ ಭಾವನಾತ್ಮಕ ವಿಶ್

    ಇದರ ಮಧ್ಯೆಯೇ, ಹಲವು ಚಿತ್ರಗಳು ಇನ್ನು ಮುಂದಿನ ಕೆಲವು ತಿಂಗಳಲ್ಲಿ ಓಟಿಟಿ ಮೂಲಕ ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಎಲ್ಲಾ ಸರಿ, ಇಂಥದ್ದೊಂದು ಪ್ರಯತ್ನವನ್ನು ಸುಮಾರು ಏಳು ವರ್ಷಗಳ ಹಿಂದೆಯೇ ಕಮಲ್ ಹಾಸನ್ ಮಾಡಿದ್ದರು ಎಂಬುದು ವಿಶೇಷ. ಆಗಿನ್ನೂ ಈ ಓಟಿಟಿಗಳಿರಲಿಲ್ಲ. ಆದರೆ, ಡೈರಕ್ಟ್ ಟು ಹೋಮ್ (ಡಿಟಿಎಚ್) ಮೂಲಕ ತಮ್ಮ ‘ವಿಶ್ವರೂಪಂ’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅವರು ಪ್ರಯತ್ನ ನಡೆಸಿದ್ದರು.

    ಹೌದು, ‘ವಿಶ್ವರೂಪಂ’ ಚಿತ್ರವನ್ನು ಡಿಟಿಎಚ್ ಮೂಲಕ ನೇರವಾಗಿ ಮನೆಗೆ ತಲುಪಿಸುವುದಕ್ಕೆ ಪ್ರಯತ್ನ ಮಾಡಿದ್ದರು ಕಮಲ್ ಹಾಸನ್. ಆದರೆ, ಈಗಿನಂತೆ ಆಗಲೂ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಪ್ರಮುಖವಾಗಿ ಚಿತ್ರಮಂದಿರದವರು, ಇಂಥದ್ದೊಂದು ಪ್ಲಾನ್‌ಗೆ ಸುತಾರಾಂ ಒಪ್ಪಲಿಲ್ಲ. ಇದರಿಂದ, ಜನ ಚಿತ್ರಮಂದಿರಗಳಿಗೆ ಬರುವುದಿಲ್ಲ ಮತ್ತು ಇದರಿಂದ ಚಿತ್ರಮಂದಿರಗಳಿಗೆ ಭಾರೀ ಸಮಸ್ಯೆ ಎದುರಾಗಲಿದೆ ಎಂಬ ಕಾರಣಕ್ಕೆ ಅಡ್ಡಪಡಿಸಿದರು. ಅಷ್ಟೇ ಅಲ್ಲ, ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ಮಾಡಿದರೆ, ಕಮಲ್ ಹಾಸನ್ ಚಿತ್ರಗಳನ್ನು ಬ್ಯಾನ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು.

    ಇದನ್ನೂ ಓದಿ: ಜೀವನದ ಪಾಠ ಕಲಿತ ದಿನಗಳವು … ‘ಡಾರ್ಲಿಂಗ್’ ಕೃಷ್ಣ ಹಾಗೆ ಹೇಳಿದ್ಯಾಕೆ?

    ಕೊನೆಗೆ, ಬೇರ ದಾರಿ ಇಲ್ಲದೆ ಕಮಲ್, ಚಿತ್ರಮಂದಿರಗಳಲ್ಲೇ ‘ವಿಶ್ವರೂಪಂ’ ಚಿತ್ರವನ್ನು ಬಿಡುಗಡೆ ಮಾಡಿದರು. ಬಹುಶಃ ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರಮಂದಿರಗಳಿಗೂ ಮುನ್ನ ಬೇರೆ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ಚಿತ್ರ ‘ವಿಶ್ವರೂಪಂ’ ಆಗುತಿತ್ತು. ಆದರೆ, ಆಗ ಇನ್ನೂ ಕಾಲ ಕೂಡಿ ಬಂದಿರಲಿಲ್ಲವಾದ್ದರಿಂದ, ಅಂಥದ್ದೊಂದು ಪ್ರಯತ್ನ ಈಗ ಜಾರಿಗೆ ಬರುತ್ತಿದೆ.

    ಈ ನಕಲಿ ಉಪೇಂದ್ರ ಯಾರು ಹೇಳಿ ನೋಡೋಣ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts