More

    ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಯಾಕೆ ಹಾಜರಾಗಬಾರದು? ಮೋದಿ ಉತ್ತರಿಸಲಿ; ಕಮಲ್ ಹಾಸನ್

    ನವದೆಹಲಿ: ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಲೋಕಾರ್ಪಣೆಗೊಳಸುತ್ತಿದ್ದಾರೆ. ಈಗಾಗಲೇ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ 21 ಪಕ್ಷಗಳು ಘೋಷಿಸಿವೆ. ಇದೇ ವೇಳೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ 25 ಪಕ್ಷಗಳು ಹೇಳಿವೆ. ಈ ನಡುವೆ ನಟ ಕಮಲ್ ಹಾಸನ್ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ಬಗ್ಗೆ ಜಾಲತಾಣಗಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿವೆ.

    ದೇಶದ ಹೆಮ್ಮೆಯ ಕ್ಷಣವೊಂದು ರಾಜಕೀಯವಾಗಿ ವಿಭಜನೆಯಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅತ್ಯಂತ ಸರಳವಾದ ಪ್ರಶ್ನೆಯೊಂದನ್ನು ಕೇಳುತ್ತಿದ್ದೇನೆ. ”ನೂತನ ಸಂಸತ್ ಭವನದ ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳು ಯಾಕೆ ಹಾಜರಾಗಬಾರದು? ದಯವಿಟ್ಟು ದೇಶದ ಜನತೆಗೆ ತಿಳಿಸಿ” ಎಂದು ಹೇಳಿಕೊಂಡಿದ್ದಾರೆ. ದೇಶದ ಮುಖ್ಯಸ್ಥರಾಗಿರುವ ಭಾರತದ ರಾಷ್ಟ್ರಪತಿಗಳು ಈ ಐತಿಹಾಸಿಕ ಸಂದರ್ಭದಲ್ಲಿ ಭಾಗವಹಿಸದಿರಲು ಯಾವುದೇ ಕಾರಣ ತಿಳಿಯುತ್ತಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.

    ನೂತನ ಸಂಸತ್​ ಭನವದ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಅವರನ್ನು ಆಹ್ವಾನಿಸದಿರುವ ಬಗ್ಗೆ ವಿರೋಧ ಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ನಾನು ಭಾನುವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಶದ ಹಿತಾಸಕ್ತಿಯಿಂದ ಪಾಲ್ಗೊಳ್ಳುತ್ತೇನೆ ಎಂದು ಕಮಲ್ ಹಾಸನ್ ಹೇಳಿಕೊಂಡಿದ್ದಾರೆ.

    ಹೊಸ ಸಂಸತ್ ಭವನದ ದೃಶ್ಯಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಪ್ರತೀಕ ಎಂದು ಹೇಳಿದ್ದಾರೆ. 

    ರಾಷ್ಟ್ರಪತಿ ಉದ್ಘಾಟಿಸಬೇಕು ಎಂದ ಕಾಂಗ್ರೆಸ್

    ಹೊಸ ಸಂಸತ್ ಭವನದ ಉದ್ಘಾಟನೆ ಕುರಿತು ಅಧಿಕೃತ ಆಹ್ವಾನ ಪತ್ರಿಕೆಯನ್ನು ಲೋಕಸಭಾ ಸಚಿವಾಲಯ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೇ 28ರಂದು ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

    ಸದ್ಯ ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟಿಸುತ್ತಿರುವುದರ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಹೊಸ ಪಾರ್ಲಿಮೆಂಟ್ ಕಟ್ಟಡ ಆಡಳಿತ ಪಕ್ಷದ ಹೆಚ್ಚುಗಾರಿಕೆಯಲ್ಲ. ಅದು ಪ್ರಜಾಪ್ರಭುತ್ವದ ಪ್ರತೀಕ. ಹೀಗಾಗಿ ರಾಷ್ಟ್ರಪತಿ, ದೌಪದಿ ಮುರ್ಮು ಅವರು ಈ ಕಟ್ಟಡವನ್ನು ಉದ್ಘಾಟಿಸಬೇಕು. ಪ್ರಧಾನಿ ಉದ್ಘಾಟಿಸುವುದು ಸಾಂವಿಧಾನಿಕ ಹುದ್ದೆಗೆ ಮಾಡುವ ಅವಮಾನ ಎಂದು ಕಾಂಗ್ರೆಸ್ ಟೀಕಿಸಿದೆ.

    ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು

    ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದಿಪ್ ಸಿಂಗ್ ಪುರಿ, ಕಾಂಗ್ರೆಸ್​ಗೆ ವಿವಾದ ಸೃಷ್ಟಿಸುವುದೆಂದರೆ ಬಹಳ ಇಷ್ಟ. ರಾಷ್ಟ್ರಪತಿ ಮತ್ತು ಪ್ರಧಾನಿ ಇಬ್ಬರೂ ಸಂಸದೀಯ ವ್ಯವಸ್ಥೆಯ ಭಾಗ. ಆದರೆ, ರಾಷ್ಟ್ರಪತಿಗಳು ಸಂಸತ್‌ನ ಯಾವುದೇ ಸದನದ ಸದಸ್ಯರಲ್ಲ. ಪ್ರಧಾನಿ ಸಂಸತ್‌ ಸದಸ್ಯರಾಗಿರುತ್ತಾರೆ. ಹೀಗಾಗಿ ಪ್ರಧಾನಿಯವರಿಂದ ಈ ಕಟ್ಟಡ ಉದ್ಘಾಟನೆ ಆಗುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ.

    ಈ ರೀತಿಯ ಕಟ್ಟಡಗಳನ್ನು ಪ್ರಧಾನಿಯೇ ಲೋಕಾರ್ಪಣೆ ಮಾಡಿದ ಉದಾಹರಣಿಗಳು ಈ ಹಿಂದೆಯೂ ಇದೆ. 1975ರಲ್ಲಿ ಸಂಸತ್ ಭವನದ ಅನೆಕ್ಸ್ ಕಟ್ಟಡವನ್ನು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಉದ್ಘಾಟಿಸಿದ್ದರು. 1987ರಲ್ಲಿ ಸಂಸತ್‌ ಭವನ ಗ್ರಂಥಾಲಯಕ್ಕೆ ಪ್ರಧಾನಿ ರಾಜೀವ್‌ ಗಾಂಧಿ ಚಾಲನೆ ನೀಡಿದ್ದರು. ಆಗ ಕಾಂಗ್ರೆಸ್‌ ಸರ್ಕಾರ ಮುಖ್ಯಸ್ಥರು ಈ ಕಾರ್ಯ ಮಾಡಬಹುದು. ಈಗ ನಮ್ಮ ಸರ್ಕಾರದ ಮುಖ್ಯಸ್ಥರು ಉದ್ಘಾಟನೆ ಮಾಡಬಾರದೆ? ಎಂದು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts