More

    ಕಳಸಾ ಬಂಡೂರಿಗೆ ಪ್ರತ್ಯೇಕ ಅನುದಾನ ಮೀಸಲಿಡಿ

    ಬೆಳಗಾವಿ: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿಯ ಕಳಸಾ ಬಂಡೂರಿ ಯೋಜನೆ ಕಾಮಗಾರಿಗೆ ಈ ಬಾರಿ ಬಜೆಟ್‌ನಲ್ಲಿ ಪ್ರತ್ಯೇಕವಾಗಿ 2 ಸಾವಿರ ಕೋಟಿ ರೂ.ಅನುದಾನ ಮೀಸಲಿಡಬೇಕು ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳಸಾ ಬಂಡೂರಿ ಮತ್ತು ಮಲಪ್ರಭಾ ನದಿ ಜೋಡಣೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇದೀಗ ಶುಭಾಂತ್ಯ ಕಂಡಿದೆ. ಹೀಗಾಗಿ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
    ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯಕ್ಕೆ ಯಾರೊಬ್ಬರೂ ಮೂಗು ತೂರಿಸುವ ಕೆಲಸ ಮಾಡಬಾರದು. ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣ ಮಾಡದೆ ಉತ್ತರ ಕರ್ನಾಟಕದ ರೈತರ ಅಭಿವೃದ್ಧಿಗೆ ಸಹಕರಿಸಬೇಕು. ಹಲವು ವರ್ಷಗಳ ಹಿಂದೆಯೇ ಆರಂಭಗೊಂಡಿರುವ ಕಳಸಾ ಹಳ್ಳದ ಕಾಮಗಾರಿ ಕೇವಲ 400 ಮೀಟರ್ ಬಾಕಿ ಇದ್ದು, ಅದಷ್ಟು ಬೇಗ ಮುಗಿದರೆ ಮುಂಬರುವ ಮಳೆಗಾಲಕ್ಕೆ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅಭ್ಯಂತರವಿಲ್ಲ: ನವೀಲುತೀರ್ಥ ಜಲಾಶಯದಿಂದ ಧಾರವಾಡದ 319 ಹಳ್ಳಿಗಳಿಗೆ ಕುಡಿಯುವ ನೀರು ವಿತರಣೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಕುಡಿಯುವ ನೀರಿನ ಹೆಸರಲ್ಲಿ ಆ ಭಾಗದ ಕೈಗಾರಿಕೆಗಳಿಗೆ ನೀರು ನೀಡಲು ಪ್ರಯತ್ನಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಉಗ್ರ ಹೋರಾಟ ಮಾಡುತ್ತೇವೆ ಎಂದು ಸಿದ್ದಗೌಡ ಮೋದಗಿ ಎಚ್ಚರಿಸಿದರು.

    ಆರ್.ಎಸ್.ದರ್ಗೆ, ಸುರೇಶ ಮಲ್ಲಿಂಗನವರ ಸೇರಿ ಕೃಷಿಕ ಸಮಾಜದ ಸದಸ್ಯರು, ಇತರರು ಉಪಸ್ಥಿತರಿದ್ದರು.

    ಸವದತ್ತಿಯ ನವೀಲತಿರ್ಥ ಜಲಾಶಯದಿಂದ ಧಾರವಾಡ ಜಿಲ್ಲೆಯ ಗ್ರಾಮಗಳಿಗೆ ನೀರು ಒದಗಿಸಲು ರೂಪಿಸುತ್ತಿರುವ ಯೋಜನೆಯನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಷ್ಟು ವರ್ಷ ಮಹದಾಯಿ ಮತ್ತು ಕಳಸಾ ಬಂಡೂರಿ ನದಿ ಜೋಡಣೆಗಾಗಿ ಹೋರಾಟ ಮಾಡಿದವರು ನಾವು. ಈಗ ಧಾರವಾಡಕ್ಕೆ ಬೆಣ್ಣೆ ನೀಡುವ ನಿಲುವು ಖಂಡನೀಯ.
    | ಅಶೋಕ ಚಂದರಗಿ, ಕನ್ನಡಪರ ಸಂಘನೆಗಳ ಒಕ್ಕೂಟದ ಕ್ರಿಯಾ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts