More

    ಆಟೋಟಗಳಿಗೂ ಮಕ್ಕಳನ್ನು ಪ್ರೋತ್ಸಾಹಿಸಿ,ಪಾಲಕರಿಗೆ ತಿಪ್ಪಾರೆಡ್ಡಿ ಮನವಿ

    ಚಿತ್ರದುರ್ಗ: ಹೆಚ್ಚು ಅಂಕ ಪಡೆಯ ಬೇಕೆಂದು ಒತ್ತಾಯಿಸುವುದರ ಜತೆಗೆ ಆಟೋಟ,ಕಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸ ಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪಾಲಕರಿಗೆ ಮನವಿ ಮಾಡಿದರು. ಶಿಕ್ಷಣ ಇಲಾಖೆ ನಗರದ ಸೇಂಟ್ ಜೋ ಸೆಫ್ ಕಾನ್ವೆಂಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಚಿತ್ರದುರ್ಗ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಡೋನೇಶನ್ ಹಾವಳಿಯಿಂದಾಗಿ ಮಕ್ಕಳ ಶಿಕ್ಷಣ ಪೂರೈಸಿದರೆ ಸಾಕಪ್ಪ ಎಂಬ ಭಾವನೆ ಪಾಲಕರಲ್ಲಿದೆ. ಆದರೆ ಪ್ರತಿಯೊಬ್ಬರಲ್ಲೂ ಪ್ರ ತ್ಯೇಕ ಪ್ರತಿಭೆಗಳಿರುತ್ತವೆ. ಶಿಕ್ಷಣದೊಂದಿಗೆ ಮಕ್ಕಳಿಗೆ ಸೂಕ್ತ ಸ್ವಾತಂತ್ರೃವನ್ನೂ ಕೊಟ್ಟರೆ ಅವರಲ್ಲಿ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಕ್ರೀಡಾ ಸಾಧಕರಿಗೆ ಉದ್ಯೋಗ ಸಹಿತ ನಾನಾ ಸವಲತ್ತುಗಳನ್ನು ಸರ್ಕಾರಗಳು ನೀಡುತ್ತಿವೆ. ಕ್ರೀಡೆ ಎಂದರೆ ಕ್ರಿಕೆಟ್‌ವೊಂದೇ ಅಲ್ಲ. ದೇಸಿ ಕ್ರೀಡೆಗಳೆಡೆ ಆಸಕ್ತಿ ಹೊಂದ ಬೇಕು.

    ಪ್ರತಿಭೆ ಮತ್ತು ಸಾಮರ್ಥ್ಯ ಸಾಬೀತಿಗೆ ಪ್ರತಿಭಾ ಕಾರಂಜಿ ಉತ್ತಮ ಅವಕಾಶ ಒದಗಿಸಿದೆ. ವಿದ್ಯಾಭ್ಯಾಸ ಇಲ್ಲದವರೂ ಕಲೆಯಲ್ಲಿ ಉತ್ತ ಮ ಸಾಧನೆ ಮಾಡಿದ್ದಾರೆ. ಮಕ್ಕಳನ್ನು ನಿರ್ಬಂಧಿಸದೆ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಪಾಲಕರು,ಶಿಕ್ಷಕರಿಂದಾಗ ಬೇಕೆಂದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ,ಇಂಥ ಕಾರ‌್ಯಕ್ರಮಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಶಿಕ್ಷಕರು ಮುತುವರ್ಜಿ ವಹಿಸಬೇಕೆಂದರು.

    ಡಿಡಿಪಿಐ ರವಿಶಂಕರ್‌ರೆಡ್ಡಿ,ಬಿಇಒ ತಿಪ್ಪೇಸ್ವಾಮಿ, ರಾಜ್ಯಸರ್ಕಾರಿ ನೌಕರರ ಸಂಘದ ಸದಸ್ಯ ತಿಮ್ಮಾರೆಡ್ಡಿ ಮತ್ತು ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts