More

    ಪಿಲಿಕುಳದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ ಸೆರೆ

    ಮಂಗಳೂರು: ಅಧಿಕಾರಿಗಳ ನಿರ್ಲಕ್ಷೃದಿಂದ ಮಂಗಳೂರಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದಿಂದ ಬೃಹತ್ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡ ಘಟನೆ ನಡೆದಿದ್ದು, ತಪ್ಪಿಸಿಕೊಂಡ ಸರ್ಪಕ್ಕಾಗಿ ಅಧಿಕಾರಿಗಳು ಮೃಗಾಲಯ ಪೂರ್ತಿ ಉಡುಕಾಡಿದ ಘಟನೆ ಶುಕ್ರವಾರ ನಡೆದಿದೆ.

    ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನವು ಅಳಿವಿನಂಚಿನ ಕಾಳಿಂಗ ಸರ್ಪದ ಬ್ರೀಡಿಂಗ್ ಸೆಂಟರ್ ಕೂಡ ಆಗಿದೆ. ಸದ್ಯ ಇಲ್ಲಿ 11 ಕಾಳಿಂಗ ಸರ್ಪಗಳಿದ್ದು, ಇದರಲ್ಲಿ ಒಂದು ಕಾಳಿಂಗ ಸರ್ಪ ಶುಕ್ರವಾರ ಮಧ್ಯಹ್ನದ ವೇಳೆ ತನ್ನ ಗೂಡು ದಾಟಿ ಹೊರಬಂದಿತ್ತು. ಮಾಹಿತಿ ತಿಳಿದೊಡನೆ ಸರ್ಪಕ್ಕಾಗಿ ಪಿಲಿಕುಳ ಪ್ರಾಣಿಸಂಗ್ರಹಾಲಯ ಪೂರ್ತಿ ಅಧಿಕಾರಿಗಳು ಉಡುಕಾಡಿದ್ದಾರೆ. ಪಿಲಿಕುಲ ನಿಸರ್ಗದಾಮದ ಟಿಕೆಟ್ ಕೌಂಟರ್ ಬಳಿ ಬಂದ ಕಾಳಿಂಗ ಸರ್ಪವನ್ನು ಕಂಡೊಡನೆ ಸಿಬ್ಬಂದಿ ಹಾಗೂ ಪ್ರವಾಸಕ್ಕೆ ಬಂದಿದ್ದ ಜನರು ಹೌಹಾರಿದರು. ಈ ವೇಳೆ ಟಿಕೆಟ್ ಕೌಂಟರ್ ಬಳಿಯಿಂದ ರಸ್ತೆ ದಾಟಿ ವಿಜ್ಞಾನ ಕೇಂದ್ರ ದತ್ತ ಕಾಳಿಂಗ ಸರ್ಪವು ಸಾಗಿದೆ. ತಕ್ಷಣದಲ್ಲಿ ಹಾವು ಹಿಡಿಯುವ ತಂಡದ ಕಾರ್ಯಾರಚಣೆಯಲ್ಲಿ ಕಾಳಿಂಗ ಸರ್ಪ ಸೆರೆಹಿಡಿದು ಸೂಕ್ತ ಆರೋಗ್ಯ ತಪಾಸಣೆ ನಡೆಸಿ ಕಾಳಿಂಗ ಸರ್ಪದ ಗೂಡಿನಲ್ಲಿ ಬಿಡಲಾಗಿದೆ.

    ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಕೇಂದ್ರ

    ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನವು 2004ರಲ್ಲಿ ಆರಂಭಗೊಂಡಿದ್ದು, ಈ ಮೃಗಾಲಯವನ್ನು ಸೆಂಟ್ರಲ್ ಝೂ ಅಥಾರಿಟಿ ಆಫ್ ಇಂಡಿಯಾದಿಂದ ಪ್ರಮುಖ ಮೃಗಾಲಯ ಎಂದು ಗುರುತಿಸಲಾಗಿದೆ. ಇದು ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಕೇಂದ್ರವೆಂದು ಗುರುತಿಸಲ್ಪಟ್ಟ ಏಕೈಕ ಮೃಗಾಲಯವಾಗಿದೆ. ಕಾಳಿಂಗ ಸರ್ಪವನ್ನು ವೈಜ್ಞಾನಿಕವಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಈಗಾಗಲೇ 180 ಸರ್ಪದ ಮರಿಗಳನ್ನು ಬೆಳೆಸಿ ಸೂಕ್ತ ವಾತಾವರಣವಿರುವ ಕಾಡಿಗೆ ಬಿಡಲಾಗಿದೆ.

    —————-

    ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯ

    ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿಗೆ ಪಿಲಿಕುಳದಲ್ಲಿ ಪೂರಕ ವಾತವರಣ, ಆರೈಕಾ ವೈವಸ್ಥೆಯಿದ್ದು, ಇಲ್ಲಿ ಅವುಗಳಿಗೆ ಕಾಡಿನಲ್ಲಿ ಇರುವ ವಾತವರಣ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯವಾಗಿದ್ದರಿಂದ ಸರ್ಪಗಳು ಸೂಕ್ತ ಸಂಗಾತಿಯ ಹುಡುಕಾಡದಲ್ಲಿರುತ್ತದೆ. ಇದೇ ಕಾರಣದಿಂದ ಶುಕ್ರವಾರ ಕಾಳಿಂಗ ಸರ್ಪವು ತಪ್ಪಿಸಿಕೊಂಡು ಹೊರಬಂದಿದೆ ಎಂದು ಪಿಲಿಕುಳ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಲ ಧಗೆಯಿಂದ ಪಿಲಿಕುಳ ಜೈವಿಕ ಉದ್ಯಾನವನದ ಜೀವಿಗಳು ಇರಲಾಗದೆ ಶಕ್ತಿಮೀರಿ ಹೊರವರಲು ಪ್ರಯತ್ನಿಸುತ್ತಿದೆ, ಕೆಲವೆಡೆ ಸಮರ್ಪಕ ಭದ್ರತಾ ವ್ಯವಸ್ಥೆಗಳಿಲ್ಲದ ಕಾರಣ ಜೀವಿಗಳು ಕಣ್ತಪ್ಪಿಸಿ ಹೊರಬರುತ್ತಿದೆ ಎಂಬ ಆರೋಪವೂ ಇದೆ.

    ——————

    ಸಂತಾನೋತ್ಪತ್ತಿ ಸಮಯವಾಗಿದ್ದರಿಂದ ಕಾಳಿಂಗ ಸರ್ಪವು ಪಿಲಿಕುಳದ ಜೈವಿಕ ಉದ್ಯಾನವನದಿಂದ ಹೊರಬಂದ ವಿಚಾರ ತಿಳಿಯಿತು. ತಕ್ಷಣದಲ್ಲಿ ಅದನ್ನು ಹಿಡಿದು ಸಂರಕ್ಷಣೆ ಮಾಡಲಾಗಿದೆ. ಸೂಕ್ತ ತಪಾಸಣೆ ಮಾಡಿ ಜೈವಿಕ ಉದ್ಯಾನದದಲ್ಲಿರಿಸಲಾಗಿದೆ. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಗೆ ಪುರಕವಾದ ವ್ಯವಸ್ಥೆ ಇದೆ. ಈಗಾಗಲೇ 180 ಸರ್ಪದ ಮರಿಗಳನ್ನು ಬ್ರೀಡಿಂಗ್ ಮಾಡಲಾಗಿದೆ.

    ಜಯಪ್ರಕಾಶ್ ಭಂಡಾರಿ

    ನಿರ್ದೇಶಕ, ಪಿಲಿಕುಳ ನಿಸರ್ಗ ಧಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts