More

    ಸಂಗಮೇಶ್ವರ, ಬಸವಣ್ಣದೇವರ ತೇರು

    ಕಲಘಟಗಿ: ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ಶಾಲ್ಮಲಾ ಮತ್ತು ಬೇಡ್ತಿ ಸಂಗಮ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಸಂಗಮೇಶ್ವರ, ಬಸವಣ್ಣದೇವರ ರಥೋತ್ಸವ ಮಕರ ಸಂಕ್ರಮಣದಂದು ಸೋಮವಾರ ಸಾವಿರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ 5 ಗಂಟೆಗೆ ಶ್ರೀ ಸಂಗಮೇಶ್ವರ ಹಾಗೂ ಬಸವಣ್ಣ ದೇವರಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ ಮಹಾಮಂಗಳಾರುತಿ, ಅನ್ನ ಸಂತರ್ಪಣೆ ಜರುಗಿತು. ಸಂಜೆ 5 ಗಂಟೆಗೆ ಮಹಾ ರಥೋತ್ಸವವಕ್ಕೆ ಕಲಘಟಗಿ ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಹಾಗೂ ರಾಯನಾಳ ವಿರಕ್ತಮಠದ ಅಭಿನವ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಹರ ಹರ ಮಹಾದೇವ ಸಂಗಮೇಶ್ವರ ಮಹಾರಾಜ್‌ಕೀ…ಬಸವಣ್ಣ ದೇವರ ಮಹಾರಾಜ್ ಕೀ ಜೈ ಎಂಬ ಜಯಘೋಷಗಳು ಭಕ್ತ ಸಮೂಹದಿಂದ ಮೊಳಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts