More

    ತೊಗರಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ

    ಕಲಕೇರಿ: ತೊಗರಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದಲೂ 10 ಕ್ವಿಂಟಾಲ್ ತೊಗರಿ ಖರೀದಿಸುತ್ತಿದ್ದು, 20 ಕ್ವಿಂಟಾಲ ತೊಗರಿ ತೆಗೆದುಕೊಳ್ಳುವ ಆದೇಶ ಇನ್ನು ಜಾರಿಯಾಗಿಲ್ಲ ಎಂದು ಸಿಂದಗಿ ಎಪಿಎಂಸಿ ಅಧ್ಯಕ್ಷ ಹಳ್ಳೇಪ್ಪಗೌಡ ಚೌದ್ರಿ ಹೇಳಿದರು.
    ಗ್ರಾಮದ ಪಿಕೆಪಿಎಸ್ ವತಿಯಿಂದ ಸೋಮವಾರ ಹಮ್ಮಿಕೊಂಡ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಈ ಭಾಗದ ರೈತರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಇಲ್ಲಿನ ಪಿಕೆಪಿಎಸ್ ಖರೀದಿಯ ಜವಾಬ್ದಾರಿಯನ್ನು ಹೊತ್ತಿದ್ದು, ಯಾವುದೇ ತೊಂದರೆಯಾಗದಂತೆ ರೈತರು ತಾಳ್ಮೆಯಿಂದ ಸರದಿ, ನಂಬರ್ ಆಧಾರದ ಮೇಲೆಯೇ ತಮ್ಮ ತೊಗರಿಯನ್ನು ನೀಡಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
    ಮುಖಂಡರಾದ ಸಿದ್ದು ಬುಳ್ಳಾ, ಪಿಕೆಪಿಎಸ್ ಅಧ್ಯಕ್ಷ ಶರಣಪ್ಪ ಮೋಪಗಾರ ಮಾತನಾಡಿದರು.
    ಎಪಿಎಂಸಿ ಸದಸ್ಯರು, ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು ರೈತರ ತೊಗರಿಯನ್ನು ಚಾಣಿಗೆ ಹಾಕಿ ತೂಕ ಮಾಡುವ ಮೂಲಕ ತೊಗರಿ ಖರೀದಿಗೆ ಚಾಲನೆ ನೀಡಲಾಯಿತು.
    ಬಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಮೋತಿಲಾಲ್ ಕುಲಕರ್ಣಿ ಪಿಕೆಪಿಎಸ್ ಸಿಇಒ ಬಸಲಿಂಗಯ್ಯ ಆಲಾಳಮಠ, ಪ್ರಕಾಶ ಪಡಶೆಟ್ಟಿ, ಉಪಾಧ್ಯಕ್ಷ ಸಾಹೇಬಗೌಡ ಹೊಸಗೌಡ್ರು, ನಾಗಯ್ಯ ಗಣಾಚಾರಿ, ದಸ್ತಗೀರಸಾಬ ವಲ್ಲಿಬಾಯಿ, ರಪೀಕ್ ಮಂದೇವಾಲಿ, ಪ್ರಕಾಶ ಯರನಾಳ, ಅಪ್ಪಸಾಹೇಬ ದೇಸಾಯಿ, ಭೀಮಣ್ಣ ವಡ್ಡರ, ವಿರೇಶ ರೂಡಗಿ, ಗುರು ಸಜ್ಜನ್, ಮಲ್ಲೇಶಪ್ಪ ಪೂಜಾರಿ, ಬಾಪುಗೌಡ ಕರವಿನ್,ಪೈಸಾಗರ ಜಗಶೆಟ್ಟಿ, ಸಂಗು ದೇಸಾಯಿ, ಪ್ರಕಾಶ ಭೋವಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts