More

    ಕರೊನಾ ಸೈನಿಕರಿಗೆ ಕೃತಜ್ಞತೆಗಳು

    ಕಲಕೇರಿ: ಕರೊನಾ ತಡೆಗೆ ಪೊಲೀಸ್, ಆರೋಗ್ಯ, ಆಶಾ ಹಾಗೂ ಪೌರ ಕಾರ್ಮಿಕರು ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿರುವವರ ಕಾರ್ಯ ಶ್ಲಾಘನಾರ್ಹ ಎಂದು ಜಿಪಂ ಮಾಜಿ ಸದಸ್ಯ ಸಾಹೇಬಗೌಡ ಪಾಟೀಲ ವಣಕಿಹಾಳ ಹೇಳಿದರು.
    ಗುರುವಾರ ಗ್ರಾಮದ ಸಮುದಾಯ ಕೇಂದ್ರದ ಆವರಣದಲ್ಲಿ ಎ.ಎಸ್. ಪಾಟೀಲ ನಡಹಳ್ಳಿ ಅಭಿಮಾನಿ ಬಳಗದಿಂದ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
    ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೋಂಕು ನಿವಾರಣೆಗೆ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಇಂಥ ಪರಿಸ್ಥಿತಿಯಲ್ಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹಾಗೂ ಅವರ ಪತ್ನಿ ಮಹಾದೇವಿಯವರು ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರಗಳ ಜನರ ಕಷ್ಟಗಳಿಗೆ ಸ್ಪಂದಿಸಿ ಈಗಾಗಲೇ ಅಂದಾಜು 20 ಸಾವಿರ ದಿನಸಿ ಕಿಟ್‌ಗಳನ್ನು ವಿತರಿಸುವುದರ ಜತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಪ್ರಶಂಸಿದರು. ಕರೊನಾ ಹಾವಳಿ ಮುಗಿಯುವವರೆಗೂ ಶಾಸಕರು ಹಾಗೂ ಅವರ ಅಭಿಮಾನಿಗಳು ಜನರ ಕಷ್ಟಗಳಿಗೆ ಸ್ಪಂದಿಸುವುದಾಗಿ ಹೇಳಿದರು.
    ವಿ.ಆರ್. ಝಳಕಿ, ಸಂಗಾರಡ್ಡಿ ದೇಸಾಯಿ, ಎಂ.ಎಂ. ಗುಡ್ನಾಳ, ಶಿವರಾಯ ಮೋಪಗಾರ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ಸಂಗನಗೌಡ ಪಾಟೀಲ, ದವಲು ನಾಯ್ಕೋಡಿ, ಪರಶುರಾಮ ಬೇಡರ, ಮೈನುದ್ದೀನ್ ಮನಿಯಾರ್, ಮಹಿಮೂದ್ ಕೆಂಭಾವಿ, ಬಸೀರ್ ನಾಯ್ಕೋಡಿ, ಮಡಿವಾಳಪ್ಪ ತಳವಾರ, ಯಲ್ಲಪ್ಪ ಹೊಸಮನಿ, ನಬಿಲಾಲ ನಾಯ್ಕೋಡಿ, ಹಸನ್ ನಾಗಾವಿ, ಮುದಕಣ್ಣ ಬೂದಿಹಾಳ ಮತ್ತಿತರರು ಇದ್ದರು.

    ಕರೊನಾ ಸೈನಿಕರಿಗೆ ಕೃತಜ್ಞತೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts