More

  ಜಿಲ್ಲೆಗೆ ಮೆಡಿಕಲ್​ ಕಾಲೇಜು ಮಂಜೂರಿಗೆ ಸರ್ಕಾರ ನಿರ್ಲಕ್ಷ್ಯ

  ಕೋಲಾರ: ಮೆಡಿಕಲ್​ ಕಾಲೇಜುಗಳನ್ನು ರಾಜಕಾರಣಿಗಳು ಹಣ ಮಾಫಿಯ ಕೇಂದ್ರಗಳಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜು ಮಂಜೂರು ಮಾಡಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಕೆಆರ್​ಎಸ್​ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.

  ನಗರದ ಶಾಶ್ವತ ನೀರಾವರಿ ಹೋರಾಟದ ವೇದಿಕೆಯಲ್ಲಿ ಜನಜಾಗೃತಿ ಬೈಕ್​ ರ್ಯಾಲಿಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಇತ್ತೀಚಿನ ದಿನಗಳಲ್ಲಿ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇದಕ್ಕೆ ಹೆಚ್ಚುವರಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಬೇಸರಿಸಿದರು.

  ರಾಜಕಾರಣಿಗಳ ಹಾಗೂ ಬಲಾಢ್ಯರ ಮಾಲೀಕತ್ವದಲ್ಲಿ ಮೆಡಿಕಲ್​ ಕಾಲೇಜು, ನರ್ಸಿಂಗ್​ ಹೋಂಗಳು ನಡೆಯುತ್ತಿವೆ. ಸರ್ಕಾರದಿಂದ ಗುಣಮಟ್ಟದ ಚಿಕಿತ್ಸೆ ಸೌಲಭ್ಯಗಳನ್ನು ಕಲ್ಪಿಸಿದರೆ ಅವರಿಗೆ ಹಣ ಸುಲಿಗೆ ಮಾಡಲು ಅವಕಾಶ ಸಿಗುವುದಿಲ್ಲ ಎಂದು ದೂರಿದರು.

  ಕಳೆದ ಬಿಜೆಪಿ ಅಧಿಕಾರದಲ್ಲಿ ಶೇ.40 ಲಂಚ ಎಂದು ಆರೋಪ ಮಾಡುತ್ತಿದ್ದ ಕಾಂಗ್ರೆಸ್​ ಸರ್ಕಾರ ಈಗ ಬಿಜೆಪಿ ಪರ್ಸೆಂಟೇಜ್​ ಅನ್ನು ಮೀರಿಸಿದೆ. ಮುಂದಿನ ದಿನಗಳಲ್ಲಿ ಕೆಆರ್​ಎಸ್​ ಪಕ್ಷವನ್ನು ಬೆಂಬಲಿಸಿದರೆ ರಾಜ್ಯದ ಜನತೆ ಭ್ರಷ್ಟಾಚಾರದಿಂದ ಹೊರಬಂದು ಸುಭಿಕ್ಷೆಯಿಂದ ಜೀವನ ರೂಪಿಸಿಕೊಳ್ಳಬಹುದು ಎಂದರು.

  ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಈ ಹಿಂದೆ ಸುಳ್ಳು ಜಾತಿ ನಕಲಿ ಪ್ರಮಾಣ ಪತ್ರ ನೀಡಿ ಶಾಸಕರಾಗಿ, ಅಧಿಕಾರ ಅನುಭವಿಸಿ ಮತ್ತೊಮ್ಮೆ ಕೋಲಾರದಲ್ಲಿ ಶಾಸಕರಾಗಿದ್ದಾರೆ. ಅವರ ಬಗ್ಗೆ ಹೈಕೋರ್ಟ್​ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರೂ ಅವರನ್ನು ಸರ್ಕಾರ ಜೈಲಿಗೆ ಹಾಕದೆ ರಕ್ಷಣೆಗೆ ನಿಂತಿದೆ ಎಂದು ಕಿಡಿಕಾರಿದರು.

  ಸರ್ಕಾರಗಳು ಕೋಲಾರಕ್ಕೆ ಕೊಳಚೆ ನೀರನ್ನು ಹರಿಸಿ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಮೂರನೇ ಬಾರಿಗೆ ಶುದ್ಧೀಕರಣಕ್ಕೆ ಒತ್ತಾಯ ಮಾಡುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ. ಇದರ ವಿರುದ್ಧ ಜನ ದಂಗೆ ಹೇಳಬೇಕು ಎಂದು ಎಚ್ಚರಿಸಿದರು. ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ರಾಜ್ಯ ಕಾರ್ಯದರ್ಶಿ ರವಿ ಜಾಣಗೆರೆ, ಕೋಲಾರ ಜಿಲ್ಲಾಧ್ಯಕ್ಷ ಮಹೇಶ್​ ಮತ್ತಿತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts