More

    ಕಲಬುರಗಿಯಲ್ಲಿ ಪ್ರತಿವರ್ಷವೂ ಉದ್ಯೋಗ ಮೇಳ; ಸಮಕುಲಾಧಿಪತಿ ಅಲಿ ಅಲ್ ಹುಸೇನ್​

    ಕಲಬುರಗಿ: ಕೆಬಿಎನ್ ವಿವಿ ವತಿಯಿಂದ ಇದೇ ಪ್ರಥಮ ಬಾರಿಗೆ ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಕೂಡ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೆಬಿಎನ್ ವಿವಿ ಸಮಕುಲಾಧಿಪತಿ ಜನಾಬ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಹೇಳಿದರು.

    ಕೆಬಿಎನ್ ವಿವಿಯ ಆವರಣದಲ್ಲಿ ಶನಿವಾರ ಮುಸ್ಲಿಂ ವೃತ್ತಿಪರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ಬೃಹತ್ ಉದ್ಯೋಗ ಮೇಳವನ್ನುದ್ದೇಶಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸಲು ಪರಿಣಿತರನ್ನಾಗಿ ಪರಿವರ್ತಿಸುವ ತರಬೇತಿ ನೀಡಲಾಗುವುದು. ಮೊದಲ ಬಾರಿಗೆ ಎ ಎಂ ಪಿ ಸಹಯೋಗದ ಉದ್ಯೋಗ ಮೇಳ ಇಲ್ಲಿನ ಅಭ್ಯರ್ಥಿಗಳಿಗೆ ವರದಾನವಾಗಿದೆ ಎಂದರು.

    ಎ ಎಂ ಪಿಯ ಉದ್ಯೋಗ ಸಹಾಯಕ ಕೋಶದ ಮುಖ್ಯಸ್ಥ ಶಾಹಿದ್ ಹೈದರ್ ಇವರು, ಕೆಬಿಎನ್ ವಿವಿಯು 60 ವರ್ಷಗಳಿಂದ ಶಿಕ್ಷಣ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕೆಬಿಎನ್ ಸಂಸ್ಥೆ ಕಲಬುರಗಿಯ ಯುವಕರ, ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ ಎಂದರು.

    ಈ ಮೇಳದಲ್ಲಿ ಸುಮಾರು ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದು 200 ಅಭ್ಯರ್ಥಿಗಳ ಕಿರುಪಟ್ಟಿ ತಯಾರಿಸಲಾಯಿತು.

    ಈ ಮೇಳದಲ್ಲಿ ಕೋಟಕ್ ಮಹಿಂದ್ರಾ, ಅಮೆಜಾನ್, ಆಪೋಲ್ಲೋ, ಶಾಹ್ ಹುಂಡೈ, ವಿ5 ಗ್ಲೋಬಲ್, ವಲ್ಲಿ ಎಂಟರ್ಪ್ರೈಸಸ್, ಎಂಎಸ್ ಎಫ್, ತುರ್ತುಲ್ಮೆಂಟ್, ಟೆಲಿಪರ್ಫಾರ್ಮೆನ್ಸ್ ಅಂಡ್ ಗ್ಲೋಬಲ್ ಸರ್ವಿಸ್, ಓ ಟಿ ಎಚ್ ಪಿ ಮುಂತಾದ ಕಂಪನಿಗಳು ಬೆಂಗಳೂರು, ಮೈಸೂರು, ಕಲಬುರ್ಗಿ, ರಾಯಚೂರ ಮತ್ತು ಹೈದರಾಬಾದ್ ನಿಂದ ಆಗಮಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts