More

    ಎಪಿಎಸ್ ಕಾಲೇಜಿನಲ್ಲಿ ಮೇ 4ರಂದು ವಿಕಲಚೇತರಿಗೆ ಉದ್ಯೋಗ ಮೇಳ

    ಬೆಂಗಳೂರು ಪದವಿ, ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಮೇ 4ರಂದು ಎಪಿಎಸ್ ವಾಣಿಜ್ಯ ಕಾಲೇಜಿನಲ್ಲಿ ಉದ್ಯೋಗ ಮೇಳ (ಜೋಬಾಥನ್ -2024)ವನ್ನು ಆಯೋಜಿಸಲಾಗಿದೆ.

    ಆಚಾರ್ಯ ಪಾಠ ಶಾಲಾ (ಎಪಿಎಸ್) ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಎಬಿಲಿಟೀಸ್, ಸಾಹಿರ ಜಾಬ್. ವಿನ್ ವಿನ್ಯಾಸ ಫೌಂಡೇಶನ್ ಸಹಯೋಗದಲ್ಲಿ ಮೇಳ ಏರ್ಪಡಿಸಲಾಗಿದೆ. ಕಿವುಡ, ಮೂಗ, ಅಂಧ, ದೈಹಿಕ ಅಂಗ ನ್ಯೂನತೆ ಇರುವ ವ್ಯಕ್ತಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
    ಎಪಿಎಸ್ ಶಿಕ್ಷಣ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 89 ವರ್ಷಗಳ ವೈಭವದ ಸೇವೆ ಸಲ್ಲಿಸಿದೆ. ಪ್ರಸ್ತುತ ಸಿಟಿ ಕ್ಯಾಂಪಸ್ ಮತ್ತು ಸೋಮನಹಳ್ಳಿ, ಕ್ಯಾಂಪಸ್‌ನಲ್ಲಿ 11 ಸಂಸ್ಥೆಗಳನ್ನು ನಡೆಸುತ್ತಿದೆ. ನರ್ಮದಾ -ವಿಕಲಚೇತನರಿಗಾಗಿ ಸ್ವಾಪಿತಗೊಂಡಿರುವ ವಿಶೇಷ ಘಟಕವಾಗಿದೆ.

    ಎಪಿಎಸ್ ಶಿಕ್ಷಣ ಸಂಸ್ಥೆ ವಿಕಲಾಂಗ ವ್ಯಕ್ತಿಗಳಿಗೆ ದೊಡ್ಡ ವೇದಿಕೆಯನ್ನು ಒದಗಿಸಿದೆ. ಪ್ರಸ್ತುತ 64 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ಮತ್ತು ವಿಶೇಷ ಸವಾಲು ಹೊಂದಿರುವ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರೆಲ್ಲರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ, ಮಧ್ಯಾಹ್ನದ ಊಟ, ಬೃಹತ್ ಬೈಲ್ ಗ್ರಂಥಾಲಯ, ಕಂಪ್ಯೂಟರ್ ತರಬೇತಿ, ಕನಿಷ್ಠ ಕಾಲೇಜು ಶುಲ್ಕವನ್ನು ಪಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts