More

    ಬಿಸಿಲಿನ ತಾಪಕ್ಕೆ ಹೈರಾಣಾದ ಜನರು; ಕಲಬುರಗಿ, ಯಾದಗಿರಿಯಲ್ಲಿ ದಾಖಲೆ ಉಷ್ಣಾಂಶ;

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನಷ್ಟು ಉಷ್ಣಾಂಶ ಹೆಚ್ಚಳವಾಗಿದ್ದು, ಗುರುವಾರ ಎಲ್ಲ ಜಿಲ್ಲೆಗಳಗಿಂತ ಕಲಬುರಗಿ ಹಾಗೂ ಯಾದಗಿರಿಯಲ್ಲಿ ಅತಿ ಹೆಚ್ಚು 41.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

    ಅದೇರೀತಿ, ಗರಿಷ್ಠ ತಾಪಮಾನದಲ್ಲಿ ರಾಯಚೂರು 40, ವಿಜಯಪುರ 39, ಬಳ್ಳಾರಿ 38.9, ಹಂಪೆ 38.7, ಬೆಳಗಾವಿ 37.4, ಮಂಡ್ಯ 37, ಬೀದರ್ 37.4, ಬೆಂಗಳೂರು ನಗರ 36.4, ಮೈಸೂರು 36.2 ಉಷ್ಣಾಂಶ ದಾಖಲಾಗಿದೆ. ಅಲ್ಲದೆ, ಚಿತ್ರದುರ್ಗ, ಧಾರವಾಡ, ಗದಗ, ಗೋಕಾರ್ಣ, ಕಾರವಾರ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ.

    ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ | ಮೊದಲ ದಿನವೇ 221 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; ಒಟ್ಟು ವಿವರ ಇಂತಿವೆ…

    ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಬಿಸಿಲು ಝಳ ಹೆಚ್ಚಳವಾಗಿದೆ. ಇದರಿಂದ ಬೆಳಗ್ಗೆಯಿಂದಲೇ ರಣ ಬಿಸಿಲು ಸುಡಲಾರಂಭಿಸಿದೆ. ಇಡೀ ದಿನ ಕಾಣಿಸಿಕೊಳ್ಳುವ ಬಿರುಬಿಸಿಲುಗೆ ಜನರು, ಜಾನುವಾರು, ಪಕ್ಷಿ ಮತ್ತು ಪ್ರಾಣಿಗಳು ನಲುಗುವಂತಾಗಿದೆ.

    ಕಾಡಿನಲ್ಲಿ ವಾಸಿಸುತ್ತಿರುವ ಪಕ್ಷಿಗಳು ಮತ್ತು ಪ್ರಾಣಿಗಳು ತಾಪಮಾನ ಹೆಚ್ಚಳಕ್ಕೆ ಕಂಗೆಟ್ಟು ನೀರುಗಾಗಿ ಪರಿತಪ್ಪಿಸುವಂತಾಗಿದೆ. ಪೂರ್ವ ಮುಂಗಾರು ಮಳೆ ಕುಂಠಿತ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಕೊರತೆ ಉಂಟಾಗಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಉರಿಬಿಸಿಲು ಬೆಳಗ್ಗೆಯಿಂದ ಶುರುವಾಗತೊಡಗಿದೆ. ಪ್ರಸ್ತುತ ತಿಂಗಳಲ್ಲಿ ಬಿಸಿಲು ಝಳ ಹೆಚ್ಚಳವಾಗಿರುವುದು ಸಾರ್ವಜನಿರರಿಗೆ ಆತಂಕ ಶುರುವಾಗಿದೆ.

    ಇದನ್ನೂ ಓದಿ: ಟಿಕೆಟ್ ಆಕಾಂಕ್ಷಿಯಾಗಿದ್ದ ಸತೀಶ್ ಬಂಡಿವಡ್ಡರ ರಾಜೀನಾಮೆ; ಬಾಗಲಕೋಟೆಯಲ್ಲಿ ಕಾಂಗ್ರೆಸ್​ನ ಮೊದಲ ವಿಕೆಟ್ ಪತನ

    ಶಾಖ ತರಂಗ ಸ್ಥಿತಿ:

    ಗರಿಷ್ಠ ತಾಪಮಾನದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ತರಂಗ ಸ್ಥಿತಿ ಎಂದು ಕರೆಯಲಾಗುತ್ತಿದೆ. ಕಲಬುರಗಿ, ಯಾದಗಿರಿ, ರಾಯಚೂರು ಶಾಖ ತರಂಗ ಉಂಟಾಗಿದೆ. ಕರ್ನಾಟಕ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆ ಶುಷ್ಕ ಸ್ಥಿತಿಯಲ್ಲಿ ಇರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ.

    ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಉಷ್ಣಾಂಶ ಉಂಟಾಗುತ್ತಿದೆ. ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಯಷ್ಟೇ ತಾಪಮಾನ ದಾಖಲಾಗುತ್ತಿದ್ದರೂ ಕೆಲ ಸಂದರ್ಭದಲ್ಲಿ ವಾಡಿಕೆಗಿಂತ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುತ್ತಿದೆ. ಜಾಗತಿಕ ತಾಪಮಾನ ಹೈಡ್ರಾಲಿಕ್ ಚಕ್ರಗಳಲ್ಲಿನ ಬದಲಾವಣೆಗಳು, ಐಸ್ ಮತ್ತು ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟ ಹೆಚ್ಚಳ, ಬರ, ಉಷ್ಣತೆ, ಬಿಸಿಗಾಳಿ ಏರಿಕೆ, ಮಳೆಗಾಲ ಅವಧಿ ಬದಲಾವಣೆ ಸೇರಿ ಇನ್ನಿತರ ಅಂಶಗಳು ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆ.

    ಇದನ್ನೂ ಓದಿ: ಈ ಮೂವರು ಇನ್ಸ್​​ಪೆಕ್ಟರ್​​ಗಳನ್ನು ಕೂಡಲೇ ವರ್ಗಾವಣೆ ಮಾಡಿ; ಚುನಾವಣಾ ಅಧಿಕಾರಿಗೆ ದೂರು ನೀಡಿದ ಮಾಜಿ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts