More

    ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಧರಣಿ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ಕೆಎಸ್​ಆರ್​ಟಿಸಿ ಅಂತರ್ ರಾಜ್ಯ ಹಾಗೂ ಜಿಲ್ಲೆ ಬಸ್​ಗಳನ್ನು ಗ್ರಾಮಕ್ಕೆ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಕಾಕೋಳ ಗ್ರಾಮಸ್ಥರು ಭಾನುವಾರ ರಾಷ್ಟ್ರೀಯ ಹೆದ್ದಾರಿ-4ರ ಮೇಲ್ಸೇತುವೆಯಲ್ಲಿ ಬಸ್ ಸಂಚಾರ ತಡೆದು ಧರಣಿ ನಡೆಸಿದರು.

    ಈ ಹಿಂದೆ ಗ್ರಾಮಕ್ಕೆ ನಿಲುಗಡೆ ಮಾಡುತ್ತಿದ್ದ ಬಸ್​ಗಳು ಇದೀಗ ಮೇಲ್ಸೇತುವೆ ನಿರ್ವಣವಾದ ದಿನದಿಂದ ಗ್ರಾಮದೊಳಗೆ ಬರುವ ಬದಲು ಮೇಲ್ಸೇತುವೆ ಮೂಲಕ ಸಂಚರಿಸುತ್ತಿವೆ. ಇದರಿಂದಾಗಿ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ. ಗ್ರಾಮಸ್ಥರು ರಾಣೆಬೆನ್ನೂರ, ಹಾವೇರಿ ಸೇರಿ ಬೇರೆ ಬೇರೆ ಊರುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ವಣವಾಗಿದೆ. ಈ ಹಿಂದಿನಂತೆ ಬಸ್​ಗಳನ್ನು ಗ್ರಾಮಕ್ಕೆ ನಿಲುಗಡೆ ಮಾಡಬೇಕು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಸಾರಿಗೆ ಘಟಕದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಬಸ್​ಗಳನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

    ಸ್ಥಳಕ್ಕೆ ಬಂದ ತಾಲೂಕು ಸಾರಿಗೆ ಘಟಕದ ವ್ಯವಸ್ಥಾಪಕ ಆರ್.ಸಿ. ಪಾಟೀಲ ಮಾತನಾಡಿ, ಗ್ರಾಮದ ಬಸ್​ಗಳ ಸಮಸ್ಯೆ ಕುರಿತು ಮೇಲಧಿಕಾರಿಗಳೊಂದಿಗೆ ಮಾತನಾಡಿ ಎರಡ್ಮೂರು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ನಂತರ ಧರಣಿ ಹಿಂತೆಗೆದುಕೊಳ್ಳಲಾಯಿತು. ಗ್ರಾಮದ ಯುವಕರು, ಮುಖಂಡರು ಹಾಗೂ ಹಿರಿಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts