More

    ಮೊಸರಿನ ಗಡಿಗೆಯಲ್ಲಿ ಉದ್ಭವಿಸಿದ ಸೋಮನಾಥ

    ಕೆ.ಗವಿಸಿದ್ದೇಶ ಹೊಗರಿ ಕಕ್ಕೇರಾ: ಸೋಮನಾಥ ದೇವರನ್ನು ಅಗಾಧವಾಗಿ ಪೂಜಿಸುತ್ತಿದ್ದ ಮಹಾಭಕ್ತೆ ಹುಚ್ಚಮ್ಮ ತನ್ನ ಮನೆಯಲ್ಲಿ ಒಂದು ದಿನ ಮೊಸರು ಮಾಡುವ ಗಡಿಗೆಯಲ್ಲಿ ಮಿಣಿಗಲ್ಲಿನ (ಮಿನುಗುವ ಕಲ್ಲು) ರೂಪದಲ್ಲಿ ಸೋಮನಾಥ ದೇವರು ಕಾಣಿಸಿಕೊಂಡರು.

    ಮೊಸರು ಮಾಡುವ ಗಡಿಗೆಯಲ್ಲಿ ದಿನಂಪ್ರತಿ ಹೀಗೆ ಮಿನುಗುವ ಕಲ್ಲು ಕಾಣಿಸಿಕೊಳ್ಳುತ್ತಿದ್ದರಿಂದ ಬೇಸತ್ತ ಹುಚ್ಚಮ್ಮ, ಒಂದು ದಿನ ಹುತ್ತಿನ ಒಳಗೆ ಈ ಕಲ್ಲನ್ನು ಹಾಕಿ, ಅದರ ಮೇಲೆ ದೊಡ್ಡದಾದ ಕಲ್ಲನ್ನು ಜಡಿದಳು. ಮರುದಿನ ಆ ಮಿನುಗುವ ಕಲ್ಲು ಮತ್ತೆ ಕಾಣಿಸಿಕೊಂಡಾಗ, ಆಶ್ಚರ್ಯ ಚಕಿತಳಾಗಿ ಇದರಲ್ಲಿ ಏನಾದರೂ ಚಮತ್ಕಾರ ಇರಬಹುದೆಂದು ದೇವರನ್ನು ಕೇಳಿದಾಗ, ಇದು ಸಾಮಾನ್ಯವಾದ ಮಿನುಗುವ ಕಲ್ಲಲ್ಲ. ಇದು ಸೋಮನಾಥ ದೇವರಿದ್ದು, ಈ ಕಲ್ಲನ್ನು ಒಂದು ಪವಿತ್ರವಾದ ಮಡ್ಡಿ(ಕರಿದಾದ ಗುಡ್ಡ)ಯಲ್ಲಿಟ್ಟು ಪ್ರತಿದಿನ ಪೂಜಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಅದುವೇ ಕ್ರಮೇಣವಾಗಿ ಕರಿಮಡ್ಡಿ ಸೋಮನಾಥ, ಸೋಮನಾಥ ಮಡ್ಡಿಯಂತಲೂ, ನಂತರ ಶ್ರೀ ಸೋಮನಾಥ ದೇವರೆಂದು ಕರೆಯಲ್ಪಡುವರು ಹೀಗೆ ಕ್ರಮೇಣವಾಗಿ ಹುಚ್ಚಮ್ಮನವರ ವಂಶಸ್ಥರೇ ಸೋಮನಾಥ ದೇವಾಲಯದ ಅರ್ಚಕರಾಗಿ ಇಂದಿಗೂ ಮುಂದುವರಿದಿದ್ದಾರೆ.

    ಇತಿಹಾಸಕಾರರು ಹೇಳುವ ಪ್ರಕಾರ ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿ ಸೋಮನಾಥ ಲಿಂಗಕ್ಕೆ ಭಗ್ನವಾದಾಗ ನೊಂದು ಅಲ್ಲಿನ ಜನರು ಲಿಂಗದ ತುಂಡೊಂದನ್ನು ಇಲ್ಲಿಗೆ ತಂದಿರುವ ಸಾಧ್ಯತೆ ಇದೆ ಎಂದು ಕೆಲಸವರ ಅಭಿಪ್ರಾಯವಾಗಿದ್ದು, ಇನ್ನೊಂದು ಮೂಲದ ಪ್ರಕಾರ ಗಝನಿ ಮಹ್ಮದನು ಭಾರತದ ಮೇಲೆ ೧೭ ಬಾರಿ ತನ್ನ ಸೈನ್ಯದೊಂದಿಗೆ ದಂಡೆತ್ತಿ ಬಂದು, ಸೌರಾಷ್ಟçದ ಮೇಲೆ ದಾಳಿ ಮಾಡಿದಾಗ ಭಗ್ನಗೊಂಡ ಲಿಂಗ ಸಿಡಿದು ಕಕ್ಕೇರಾದಲ್ಲಿ ಬಿತ್ತೆಂದು ಇನ್ನು ಕೆಲವರು ಹೇಳುತ್ತಾರೆ. ಆವೊಂದು ಸವಿ ನೆನಪಿಗಾಗಿ ಸೌರಾಷ್ಟ್ರ ಅಧಿಪತಿ ಶ್ರೀ ಸೋಮನಾಥ ದೇವರು ಎಂದು ಕರೆಯಲಾಗುತ್ತಿದೆ.
    ಸುರಪುರ ವಂಶಸ್ಥರಾದ ಚಿನ್ನ ಹನುಮನಾಯಕ ಮತ್ತು ಈತನ ಮಕ್ಕಳು ಕಕ್ಕೇರಾದಲ್ಲಿ ನೆಲೆಸುತ್ತಾರೆ. ಈ ಚಿನ್ನ ಹನುಮನಾಯಕ ಕಾಲದಲ್ಲಿಯೇ ಕಕ್ಕೇರಾದಲ್ಲಿ ಸೋಮನಾಥ ದೇವಾಲಕ ನಿರ್ಮಾಣ ಮಾಡಲಾಗಿದೆ ಎಂಬ ಪ್ರತೀತಿ ಇದೆ.

    ೧೦ ದಿನಗಳ ಕಾಲ ಸಂಭ್ರಮದ ಉತ್ಸವ: ಸೌರಾಷ್ಟ್ರ ಅಧಿಪತಿ ಶ್ರೀ ಸೋಮನಾಥ ಜಾತ್ರಾ ಮಹೋತ್ಸವ ಶನಿವಾರದಿಂದ ಆರಂಭವಾಗಿ ಜ.೨೩ ರವರೆಗೆ ೧೦ ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ. ಭಾನುವಾರ ಮಕರ ಸಂಕ್ರಾಂತಿಯಂದು ಸೋಮನಾಥ ದೇವರು ಗಂಗಾಸ್ಥಳಕ್ಕೆ ಕೃಷ್ಣಾ ನದಿಗೆ ತೆರಳಿ ಸಂಜೆ ದೇವರ ಹೇಳಿಕೆ ನಡೆಯಲಿದೆ. ಜ.೧೫ರಂದು ಸೋಮನಾಥ ದೇವರ ರಥೋತ್ಸವ. ಜ.೧೮ರಂದು ಸಂಜೆ ೫ಕ್ಕೆ ಉಚ್ಚಾಯಿ ರಥೋತ್ಸವ, ರಾತ್ರಿ ೮ಕ್ಕೆ ದೇವಸ್ಥಾನದಲ್ಲಿ ಸೋಮನಾಥ ಸಂಗೀತ ಪಾಠ ಶಾಲೆ ಆಶ್ರಯದಲ್ಲಿ ರಸಮಂಜರಿ ಕಾರ್ಯಕ್ರಮ. ಜ.೧೭ರಿಂದ ೨೩ರ ವರೆಗೆ ದನಗಳ ಜಾತ್ರೆ. ಉತ್ತಮ ಜಾನುವಾರುಗಳಿಗೆ ಎಪಿಎಂಸಿಯಿಂದ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಜ.೨೩ರಂದು ಸೋಮನಾಥ ರಥೋತ್ಸವದ ಕಳಸಾರೋಹಣ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts