More

    ಪೊಲೀಸ್​ ಠಾಣೆ ಮೆಟ್ಟಿಲೇರಿದ ಕಾಗೋಡು ತಿಮ್ಮಪ್ಪರ ಪತ್ನಿ!

    ಪಡುಬಿದ್ರಿ: ತನ್ನ ತಾಯಿ ಹೆಸರಿನಲ್ಲಿದ್ದ ಮನೆಯೊಂದನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಮಾಡಿಕೊಂಡ ಸಹೋದರಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

    ಕಾಗೋಡು ತಿಮ್ಮಪ್ಪರ ಪತ್ನಿ ರೂಪಾ ಯಾನೆ ದೀಪಾ ಅವರು ಸಹೋದರಿ ಕಲಾವತಿ ವಿರುದ್ಧ ಕಾಪು ಠಾಣೆಗೆ ದೂರು ನೀಡಿದ್ದಾರೆ. ಕೆ.ಟಿ.ಕೋಟೆ ಗ್ರಾಮದಲ್ಲಿ ತಾಯಿಯ ಹಕ್ಕಿನ ಜಮೀನಿನಲ್ಲಿ ವಾಸದ ಮನೆ ಇದೆ. ರೂಪಾ ಹಾಗೂ ಅವರ ಸಹೋದರಿ ಸುಶೀಲಾ ಇಬ್ಬರೂ ಈ ಜಮೀನಿಗೆ ವಾರಸುದಾರರು. ಆದರೆ ಆರೋಪಿಯು ನಕಲಿ ಸಹಿ ಸೃಷ್ಟಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿ, 2020ರ ಆಗಸ್ಟ್​ನಲ್ಲಿ ಖಾತೆ ಬದಲಾವಣೆಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿರಿ ಹಿಮವದ್​ ಗೋಪಾಲಸ್ವಾಮಿ ದರ್ಶನಕ್ಕೆ ಮತ್ತೆ ಬಂದ ಕಾಡಾನೆ! ಫೋಟೋ ವೈರಲ್​

    ಈ ವಿಷಯ ಗೊತ್ತಾಗಿ ಪರಿಶೀಲಿಸಿದಾಗ ಕಲಾವತಿ 13ರ ಜನವರಿ 2020ರಂದು ಉಡುಪಿ ನೋಟರಿ ನಾರಾಯಣ ಶೆಟ್ಟಿ ಅವರಿಂದ ಯತಾರ್ಥಿಸಲ್ಪಟ್ಟ ನಕಲಿ ಅಧಿಕಾರ ಪತ್ರ ಆಧಾರದಿಂದ ಫೆ.6ರಂದು ತಮ್ಮ ಹೆಸರಿಗೆ ಉಡುಪಿ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಈ ಬಗ್ಗೆ ವಿಚಾರಿಸಿದಾಗ ಬೆದರಿಕೆ ಹಾಕಿದ್ದಾರೆ ಎಂದು ರೂಪಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

    ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

    ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

    ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts