More

    ಸಿದ್ಧಗಂಗಾ ಕ್ಷೇತ್ರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಆದರ್ಶ ಸ್ಮರಣೀಯ

    ಕಡೂರು: ಸಿದ್ಧಗಂಗಾ ಕ್ಷೇತ್ರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಶಿಕ್ಷಣ, ಅನ್ನ ಮತ್ತು ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿಯಾಗಿ ಹೆಸರು ಮಾಡಿದ್ದರು ಎಂದು ಕಡೂರು ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಹಾಗೂ ಶ್ರೀಗಳ ಭಾವಚಿತ್ರವಿರುವ 2020ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

    ಈ ನಾಡಿನ ಲಕ್ಷಾಂತರ ಬಡವ, ದೀನ, ದಲಿತ ಮಕ್ಕಳಿಗೆ ಅನ್ನ, ವಿದ್ಯೆ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ ಸಿದ್ಧಗಂಗಾ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮವನ್ನು ಅರಿವಿನ ಮನೆ ಸೌಹಾರ್ದ ಸಹಕಾರ ಸಂಘ ನಡೆಸುತ್ತಿರುವುದು ಶ್ರೀಗಳಿಗೆ ನೀಡಿದ ಗೌರವ. ಅವರ ಆದರ್ಶ, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಾವು ಅವರಿಗೆ ನೀಡಿದ ಗುರುಕಾಣಿಕೆ ಎಂದರು.

    ಅರಿವಿನ ಮನೆ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಾ. ಸಿ.ಜೆ.ಶಶಿಧರ್ ಮಾತನಾಡಿ. ನಮ್ಮ ಸಹಕಾರ ಸಂಘ ಆರಂಭಕ್ಕೂ ಮುನ್ನ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ ಒಂದು ಉತ್ತಮ ಹೆಸರು ಸೂಚಿಸಲು ಹೇಳಿದಾಗ ಶ್ರೀಗಳು ಅರಿವಿನ ಮನೆ ಸೌಹಾರ್ದ ಸಹಕಾರ ಎಂದು ನಾಮಕರಣ ಮಾಡಿದ್ದರು. ಅವರು ನೀಡಿದ ಈ ಹೆಸರಿನಡಿ ಅರಿವಿನ ಮನೆ ಸೌಹಾರ್ದ ನಿಯಮಿತ ಇಂದು ಹತ್ತಾರು ಶಾಖೆ, 15ಕ್ಕೂ ಹೆಚ್ಚು ಎಟಿಎಂಗಳನ್ನು ತೆರೆಯುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದೆ.

    ಶ್ರೀಗಳ ಆಶೀರ್ವಾದದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅರಿವಿನ ಮನೆ ಸಂಘವು ಶ್ರೀಗಳ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿದೆ ಎಂದರು.

    ನಿರ್ದೇಶಕರಾದ ಮೋಹನ್​ಕುಮಾರ್, ಈಶ್ವರಪ್ಪ, ಎಂ.ಎಚ್.ಪ್ರಕಾಶಮೂರ್ತಿ, ಕಾಶಿನಾಥ್, ಶಿವಕುಮಾರ್, ಮಹೇಶ್ವರಪ್ಪ, ರವಿಕುಮಾರ್, ಬಸವರಾಜಪ್ಪ, ಮರುಳಸಿದ್ದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts