More

    ನಿಸಾರ್ ಅಹಮದ್ ಶಿಕ್ಷಣ ಟ್ರಸ್ಟ್‌ಗೆ 2 ಎಕರೆ ಭೂಮಿ: ಸಚಿವ ಸಂಪುಟ ಅಸ್ತು

    ಬೆಂಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ಕವಿ ನಿಸಾರ್ ಅಹಮದ್ ಅವರ ಹೆಸರಿನಲ್ಲಿರುವ ಶಿಕ್ಷಣ ಸಂಸ್ಥೆ ತೆರೆಯಲು ಅಗತ್ಯವಿರುವ ಭೂಮಿ ಮಂಜೂರು ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮತಿ ನೀಡಿದೆ.

    ನಿಸಾರ್ ಅಹಮದ್ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್ ಹೆಸರಿನ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲಿದ್ದು, ಅದಕ್ಕೆ ಎರಡು ಎಕರೆ ಜಮೀನು ನೀಡಲಾಗುವುದು ಎಂದು ಸಂಪುಟ ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ; ನಾರಾಯಣಗೌಡ

    ಇದಲ್ಲದೆ, ರಾಜ್ಯದಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು ಹೆಚ್ಚಿಸಿದ ಆದೇಶವನ್ನು ಹಿಂತೆಗೆದುಕೊಳ್ಳುವುದೋ, ಬೇಡವೋ ಎಂಬ ಬಗ್ಗೆ ಮುಂದಿನ ಸಂಪುಟದಲ್ಲಿ ಚರ್ಚಿಸಲು ನಿರ್ಧರಿಸಲಾಯಿತು. ಈ ಆದೇಶಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

    ಗ್ರಾಮ ಪಂಚಾಯಿತಿಗಳ ಅವಧಿ ಪೂರ್ಣಗೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಇದೆ. ಆದ್ದರಿಂದ ಗ್ರಾಪಂಗಳಿಗೆ ಚುನಾವಣೆ ನಡೆಯುವವರೆಗೆ ಸದ್ಯಕ್ಕೆ ಹೊಸ ಆಡಳಿತ ಸಮಿತಿಗಳನ್ನು ರಚಿಸುವ ಬಗ್ಗೆಯೂ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

    ಕುಷ್ಠ ಎಂಬ ಪದದ ಬದಲು ಸಾಂಕ್ರಾಮಿಕ ರೋಗ ಎಂದೂ, ಮಾನಸಿಕ ಅಸ್ವಸ್ಥ ಎಂಬ ಪದದ ಬದಲು ಮಾನಸಿಕ ರೋಗ ಎಂಬುದಾಗಿಯೂ ಬಳಕೆಯಲ್ಲಿ ತರಲು ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಯಿತು ಎಂದು ಸಚಿವರು ತಿಳಿಸಿದರು.

    ಇದನ್ನೂ ಓದಿ: VIDEO| ಮಿಡತೆ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸಿನಿಮಾ ಇದು!

    ಇಂದಿನ ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು ಇಂತಿವೆ.
    * ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳ. ಸಾಮಾನ್ಯ ವರ್ಗಕ್ಕೆ 28ರಿಂದ 30, ಎಸ್‌ಸಿ ಎಸ್‌ಟಿಗೆ 30ರಿಂದ 32 ವರ್ಷಕ್ಕೆ ಏರಿಸಲು ಒಪ್ಪಿಗೆ.
    * ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಂದ ಜನರು ಕರ್ನಾಟಕಕ್ಕೆ ಆಗಮಿಸುವುದಕ್ಕೆ ನಿರ್ಬಂಧ
    * ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್‌ನ ಐದು ಸ್ಥಾನಗಳಿಗೆ ನೇಮಕ ನಿರ್ಧಾರ ಸಿಎಂ ವಿವೇಚನೆಗೆ
    * ತೀರಾ ಹಳೆಯದಾಗಿರುವ ನೂರು ವಿಧೇಯಕ/ಕಾನೂನುಗಳ ನಿರಸನ
    * ಐದು ಜಿಲ್ಲೆಗಳಲ್ಲಿ ಔಷಧ ಗೋದಾಮು ಸ್ಥಾಪನೆ, ಅದಕ್ಕಾಗಿ 18.08 ಕೋಟಿ ರೂ.
    * ಕರೊನಾ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಕ್ಷೌರಿಕರು, ಚಾಲಕರಿಗೆ ವಿಧಿಸಿದ ಷರತ್ತುಗಳ ಸಡಿಲಿಕೆ
    * ಮೆಕ್ಕೆಜೋಳಕ್ಕೆ ಪರಿಹಾರ ಹಿಂಗಾರು ಜತೆ ಮುಂಗಾರು ಬೆಳೆಗೂ ಅನ್ವಯ

    ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts