More

    ದೆಹಲಿ ಮದ್ಯ ನೀತಿ ಹಗರಣ: ಮಾಜಿ ಸಿಎಂ ಕೆಸಿಆರ್ ಪುತ್ರಿ ಕವಿತಾ ಮಾ.23ರ ವರೆಗೆ ಇಡಿ ವಶಕ್ಕೆ

    ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳ ಗಾಗಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಶನಿವಾರ ದೆಹಲಿ ಕೋರ್ಟ್ ಮಾರ್ಚ್ 23ರ ವರೆಗೆ ಇಡಿ ವಶಕ್ಕೆ ನೀಡಿ ಆದೇಶಿಸಿದೆ.

    ಇದನ್ನೂ ಓದಿ: 14 ವಯಸ್ಸಿನ ಬಾಲಕಿಯನ್ನು ಗರ್ಭಿಣಿಯಾಗಿಸಿದ 43ರ ವಯಸ್ಕರ: ಅಬಾರ್ಶನ್​ಗೆ ಒಪ್ಪದ ಕಾರಣ ಭೀಕರ ಹತ್ಯೆ!

    ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್ ಅವರು ಬಿಆರ್‌ಎಸ್ ನಾಯಕಿ ರಿಮಾಂಡ್ ಕೋರಿ ಇಡಿ ಸಲ್ಲಿಸಿದ ಅರ್ಜಿಯ ಮೇಲೆ ಆದೇಶ ಹೊರಡಿಸಿದ್ದಾರೆ. ಬಿಆರ್​ಎಸ್​ ನಾಯಕಿ ಕವಿತಾರನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ತನಿಖಾ ಸಂಸ್ಥೆ ಕೋರಿತ್ತು. ಆದರೆ, ನ್ಯಾಯಾಧೀಶರು ಆಕೆಯನ್ನು ಮಾ.23ರವರೆಗೆ ಮಾತ್ರ ರಿಮಾಂಡ್ ನೀಡಿದ್ದಾರೆ. ತನ್ನ ಬಂಧನ ಕಾನೂನು ಬಾಹಿರವಾಗಿದ್ದು, ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ಕವಿತಾ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹೇಳಿದ್ದಾರೆ.

    ನಿನ್ನೆ ಹೈದರಾಬಾದ್‌ನಲ್ಲಿರುವ ಬಿಆರ್ ಎಸ್ ಎಂಎಲ್ ಸಿ ಕೆ ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿದೆ ಇಡಿ ಅಧಿಕಾರಿಗಳು, ಕೆಲವು ಗಂಟೆಗಳ ನಂತರ ಕೆಸಿಆರ್ ಪುತ್ರಿಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದರು. ಇಂದು ಅವರನ್ನು ಕವಿತಾ ಅವರನ್ನು ಇಡಿ ಪ್ರಕರಣಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.

    ಆರೋಪಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಅವರು, ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಕವಿತಾ ಅವರನ್ನು ಮಾರ್ಚ್ 23ರ ವರೆಗೆ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಕವಿತಾ ಬಂಧನವನ್ನು ಖಂಡಿಸಿ ಶನಿವಾರ ತೆಲಂಗಾಣದಾದ್ಯಂತ ಬಿಆರ್‌ಎಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಪಕ್ಷವು ಆರೋಪಿಸಿದ್ದು, ಕವಿತಾ ಅವರ ಬಂಧನವನ್ನು ಕಾನೂನುಬಾಹಿರ ಎಂದು ಹೇಳಿದೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಕೆ ಕವಿತಾ ಅವರ ಅಕ್ರಮ ಬಂಧನದ ವಿರುದ್ಧ ಬಿಆರ್‌ಎಸ್ ತೆಲಂಗಾಣದಾದ್ಯಂತ ಪ್ರತಿಭಟನೆ ನಡೆಸಿತು ಎಂದು ಪಕ್ಷ ಹೇಳಿದೆ.

    ಲೋಕಸಭೆ ಚುನಾವಣೆ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ: ಕಾರಣ ಹೀಗಿದೆ ನೋಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts