More

    ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ: ಹಡಗಲಿ, ಕೂಡ್ಲಿಗಿಯಲ್ಲಿ ಅಧಿಕಾರಿಗಳಿಗೆ ಮಾದಿಗ ಸಮುದಾಯ ಮನವಿ

    ಹೂವಿನಹಡಗಲಿ: ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ತಾಲೂಕು ಛಲವಾದಿ ಹಾಗೂ ಮಾದಿಗ ಸಮುದಾಯದಿಂದ ಸೋಮವಾರ ಶಿರಸ್ತೇದಾರ್ ಗೌಸ್ ಮೊಹಿದ್ದೀನ್‌ಗೆ ಮನವಿ ಸಲ್ಲಿಸಲಾಯಿತು.

    ಮುಖಂಡ ಜಿ.ಬುಳ್ಳಪ್ಪ ಮಾತನಾಡಿ, ಶೋಷಿತ ಸಮುದಾಯವಾದ ಮಾದಿಗ, ಛಲವಾದಿ ವರ್ಗದ ಜನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿದರು. ವಕೀಲ ಎಚ್.ಪೂಜಪ್ಪ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನದ 341, 341ಎ ಕಾಯ್ದೆಗೆ ತಿದ್ದುಪಡಿ ತಂದು ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. ತಾಪಂ ಸದಸ್ಯ ಜೆ.ಶಿವರಾಜ್, ಪುರಸಭೆ ಮಾಜಿ ಸದಸ್ಯ ವಿಲ್ಸನ್ ಸ್ವಾಮಿ, ಮುಖಂಡರಾದ ಉಚ್ಛೆಂಗೆಪ್ಪ, ಎಸ್.ನಿಂಗರಾಜ್, ಕೆ.ಪುತ್ರೇಶ, ದುರ್ಗೇಶ, ಮಂಜುನಾಥ, ಹಲಗಿ ಸುರೇಶ, ಆನಂದ ಇತರರಿದ್ದರು.

    ಕೂಡ್ಲಿಗಿಯಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಸದಸ್ಯರು ಸೋಮವಾರ ಶಾಸಕ ಎನ್.ವೈ.ಗೋಪಾಲಕೃಷ್ಣಗೆ ಮನವಿ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸಾಲುಮನಿ ಮಾತನಾಡಿ, ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಒಳಮೀಸಲು ವಿಷಯ ಪ್ರಸ್ತಾಪಿಸಿ ಶಿಾರಸು ಮಾಡಬೇಕೆಂದು ಆಗ್ರಹಿಸಿದರು. ಡಾ.ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಪಿ.ಸಂತೋಷ್ ಕುಮಾರ್, ಮುಖಂಡರಾದ ಬಂಡೆ ರಾಘವೇಂದ್ರ, ಎಚ್.ಕರಿಬಸಪ್ಪ, ಎಚ್.ಬಸಪ್ಪ, ರಮೇಶ್, ಕೆ.ಹೊನ್ನೂರಪ್ಪ, ಜಿ.ದಂಡೆಪ್ಪ, ಕೆ.ಮಹೇಶ್, ಟಿ.ಮಂಜುನಾಥ, ಮಾರುತಿ, ರಾಮಪ್ಪ, ಹನುಮಂತಪ್ಪ ಇತರರಿದ್ದರು.

    ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ: ಹಡಗಲಿ, ಕೂಡ್ಲಿಗಿಯಲ್ಲಿ ಅಧಿಕಾರಿಗಳಿಗೆ ಮಾದಿಗ ಸಮುದಾಯ ಮನವಿ
    ಕೂಡ್ಲಿಗಿಯಲ್ಲಿ ಶಾಸಕ ಗೋಪಾಲಕೃಷ್ಣರ ಆಪ್ತ ಕಾರ್ಯದರ್ಶಿ ಬಿ.ಶ್ರೀಕಾಂತ್‌ಗೆ ಕರ್ನಾಟಕ ಮಾದಿಗ ದಂಡೋರ ಸಮಿತಿ ಮನವಿ ಸಲ್ಲಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts