More

    VIDEO: ಕರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ತಮಗೆ ಆರೈಕೆ ಮಾಡಿದ ವೈದ್ಯರು, ನರ್ಸ್​​ಗಳನ್ನು ನೆನೆದು ಕಣ್ಣೀರಿಟ್ಟ ವ್ಯಕ್ತಿ; ಒಂದು ಸಂದೇಶವನ್ನೂ ಕೊಟ್ಟಿದ್ದಾರೆ…

    ಮಂಗಳೂರು: ಒಂದೆಡೆ ಆರೋಗ್ಯ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ, ಕೆಟ್ಟದಾಗಿ ವರ್ತಿಸುವವರು..ಮತ್ತೊಂದು ಕಡೆ ಕರೊನಾದಿಂದ ತಮ್ಮನ್ನು ಉಳಿಸಿಕೊಟ್ಟ ವೈದ್ಯರು, ನರ್ಸ್​ಗಳಿಗೆ ಕಣ್ಣೀರಿನ ಕೃತಜ್ಞತೆ ಸಲ್ಲಿಸುವವರು..

    ಬೆಂಗಳೂರಿನ ಪಾದರಾಯನಪುರದಲ್ಲಿ ಕ್ವಾರಂಟೈನ್​ ವಿರೋಧಿಸಿ ಗಲಭೆ ನಡೆದಿದೆ. ಅತ್ತ ಮಂಗಳೂರಿನಲ್ಲಿ ಕರೊನಾ ವೈರಸ್​ನಿಂದ ಮುಕ್ತರಾದವರೊಬ್ಬರು ತಮ್ಮ ಸಂಕಷ್ಟದ ಕ್ಷಣಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. ವೈದ್ಯರು, ನರ್ಸ್​ಗಳನ್ನು ಮನಸಾರೆ ಹೊಗಳಿ..ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನನ್ನನ್ನು ನರಕದಿಂದ ಪಾರು ಮಾಡಿದರು. ಅಂಥವರಿಗೆ ನಾವೆಷ್ಟು ಸಹಕಾರ ಕೊಡಬೇಕು ಎಂಬುದನ್ನು ಯೋಚಿಸಿ ಎಂದು ಹೇಳಿದ್ದಾರೆ.

    ನನ್ನೊಂದಿಗೆ ಪೊಲೀಸರು ಪ್ರೀತಿಯಿಂದ ಮಾತನಾಡಿದ್ದಾರೆ. ಆಸ್ಪತ್ರೆಯಲ್ಲೂ ಒಳ್ಳೆಯ ಚಿಕಿತ್ಸೆ ಕೊಟ್ಟಿದ್ದಾರೆ. ಏನೇ ಕಷ್ಟವಿದ್ದರೂ ಆ ಕ್ಷಣಕ್ಕೆ ಬಂದು ಸ್ಪಂದಿಸುತ್ತಿದ್ದರು. ನಾನು ಕರೊನಾದಿಂದ ಸಾಯಬಾರದು ಎಂದು ವೈದ್ಯಕೀಯ ಸಿಬ್ಬಂದಿ ಎಷ್ಟೆಲ್ಲ ಕಷ್ಟಪಟ್ಟರು. ಅಂದ ಮೇಲೆ ಇಡೀ ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನೂ ಈ ನರಕದಿಂದ ಪಾರಾಗಲು ನಾವೆಲ್ಲರೂ ಎಷ್ಟು ಪ್ರಯತ್ನ ಪಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದನ್ನು ಈ ವಿಡಿಯೋದಲ್ಲಿ ಕೇಳಬಹುದು.

    ಕರೊನಾಕ್ಕೆ ತುತ್ತಾಗಿದ್ದ ಇವರು ಕಳೆದ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಇವರ ಭಾವುಕದ ಮಾತುಗಳ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್​.ಹರ್ಷ ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಕರೊನಾದಿಂದ ಗುಣಮುಖರಾಗಿರುವ ಈ ವ್ಯಕ್ತಿಯ ಮಾತನ್ನು ಕೇಳಿ…ವೈರಸ್ ವಿರುದ್ಧ ಹೋರಾಟದಲ್ಲಿ ವೈದ್ಯರು, ನರ್ಸ್​ಗಳು, ಪೊಲೀಸ್ ಅಧಿಕಾರಿಗಳು, ಪ್ಯಾರಾಮೆಡಿಕಲ್​ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

    ಸಂದರ್ಭ ಬಂದರೆ ಲಾಠಿನೂ ಎತ್ತುತ್ತೀವಿ… ಸರ್ಕಾರ ಕೊಟ್ಟಿರೋ ಸ್ವಾತಂತ್ರ್ಯನೂ ಬಳಸಿಕೊಳ್ತೀವಿ…; ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ವಾರ್ನ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts