More

    ಸುಗಮ ಸಂಚಾರಕ್ಕೆ ರಾಡಾರ್​ ಕಣ್ಗಾವಲು !, ಸಂಚಾರಿ ನಿಯಮ ಉಲ್ಲಂಸಿದರೆ ಮೊಬೈಲ್​ಗೆ ಬರುತ್ತೆ ದಾಖಲೆ ಸಹಿತ ನೋಟಿಸ್​

    ಮಂಗಳೂರು ನಗರಕ್ಕೀಗ ಅತ್ಯಾಧುನಿಕ ಕ್ಯಾಮರಾ ಕಣ್ಣು, ರಾಡಾರ್​ ಕಣ್ಗಾವಲು. ಸಂಚಾರಿ ನಿಯಮ ಉಲ್ಲಂಸಿದರೆ ಸಾಕು ಮೊಬೈಲ್​ಗೆ ಬರುತ್ತೆ ದಾಖಲೆ ಸಹಿತ ನೋಟಿಸ್​……!

    ಮಂಗಳೂರು ನಗರದಲ್ಲಿ ವಾಹನಸವಾರರ ಬೇಕಾಬಿಟ್ಟಿ ಸಂಚಾರ ಸುಲಭವಲ್ಲ, ಮಂಗಳೂರು ಮಹಾನಗರದ ಸಂಪೂರ್ಣ ಸಂಚಾರ ನಿಯಂತ್ರಣ ವ್ಯವಸ್ಥೆ ಇನ್ನು ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್​ ಕಣ್ಗಾವಲಿಗೆ ಒಳಪಡಲಿರುವುದರಿಂದ ಗಲ್ಫ್​ ರಾಷ್ಟ್ರದಲ್ಲಿರುವಂತೆ ತಕ್ಷಣದಲ್ಲಿ ವಾಹನ ಸವಾರರ ಕೈಗೆ ನೋಟಿಸ್​ ಬರಲಿದೆ. ಟ್ರಾಫಿಕ್​ ಸಿಗ್ನಲ್​ ಸೇರಿದಂತೆ ಯಾವುದೇ ಕಡೆಗಳಲ್ಲಿ ಸಂಚಾರ ನಿಯಮ ಉಲ್ಲಂಸಿದರೆ ತಕ್ಷಣವೇ ಅತ್ಯಾಧುನಿಕ ಕ್ಯಾಮರಾ ಸ್ವಯಂ ಆಗಿ ಫೋಟೋ ತೆಗೆದು ವಾಟ್ಸ್​ಪ್​ ನಂಬರ್​ಗೆ ನೋಟಿಸ್​ ರವಾನೆಯಾಗಲಿದೆ. ಅಲ್ಲದೆ ಮೊಬೈಲ್​ಗೆ ಎಸ್​ಎಂಎಸ್​ ಕೂಡ ಬರಲಿದೆ.

    *ನಂಬರ್​ ಪ್ಲೇಟ್​ ಸ್ಕ್ಯಾನ್​&ದೂರು ದಾಖಲು

     ಸಿಗ್ನಲ್​ ಜಂಪ್​ ಮಾಡಿದರೆ, ಹೆಲ್ಮೆಟ್​ ಧರಿಸದಿದ್ದರೆ, ಚಾಲನೆ ವೇಳೆ ಮೊಬೈಲ್​ ಬಳಸಿದರೆ, ತ್ರಿಬಲ್​ ರೈಡ್​, ಸೀಟು ಬೆಲ್ಟ್​ ಧರಿಸದಿದ್ದರೆ ಹೀಗೆ ನಾನಾ ಟ್ರಾಫಿಕ್​ ನಿಯಮ ಉಲ್ಲಂನೆ ಅತ್ಯಾಧುನಿಕ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದು ಕಮಾಂಡ್​ ಕಂಟ್ರೋಲ್​ ರೂಂನಿಂದ ಪೊಲೀಸರಿಗೆ ರವಾನೆಯಾಗಿ, ತಕ್ಷಣವೇ ಸಂಚಾರಿ ಪೊಲೀಸರಿಂದ ನಿಯಮ ಉಲ್ಲಂಸಿದವರ ಮೊಬೈಲ್​ಗೆ ನೋಟಿಸ್​ ಹಾಗೂ ಎಸ್​ಎಂಎಸ್​ ರವಾನಿಸಲ್ಪಡಲಿದೆ. ಮಿತಿ ಮೀರಿದ ವೇಗದಲ್ಲಿ ಸಂಚರಿಸಿದರೆ, ರಾಡಾರ್​ನಿಂದ ನಂಬರ್​ ಪ್ಲೇಟ್​ ಸ್ಕ್ಯಾನ್​ ಮಾಡಿ ಫೋಟೋ ಸಹಿತ ದೂರು ದಾಖಲಾಗಲಿದೆ.

    &&&&&&&&&&&&&&&&&&

    ಮಂಗಳೂರಿನಲ್ಲಿ ಅತ್ಯಾಧುನಿಕ ಟ್ರಾಫಿಕ್​ ವ್ಯವಸ್ಥೆ

    ಮಂಗಳೂರು ಸ್ಮಾರ್ಟ್​ಸಿಟಿ ಯೋಜನೆಯ ಎರಡನೇ ಹಂತದಲ್ಲಿ ಈ ಅತ್ಯಾಧುನಿಕ ಟ್ರಾಫಿಕ್​ ವ್ಯವಸ್ಥೆ ರೂಪುಗೊಳ್ಳಲಿದೆ. ಸ್ಮಾರ್ಟ್​ಸಿಟಿಯ ಕಮಾಂಡ್​ ಅಂಡ್​ ಕಂಟ್ರೋಲ್​ ಸೆಂಟರ್​ನ ಮೊದಲ ಹಂತವನ್ನು 14 ಕೋಟಿ ರು. ವೆಚ್ಚದಲ್ಲಿ ರೂಪುಗೊಂಡಿದೆ. 5 ವರ್ಷದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗೆ 9 ಕೋಟಿ ರು. ಮೀಸಲಿರಿಸಲಾಗಿದೆ. ಎರಡನೇ ಹಂತವನ್ನು 19 ಕೋ.ರು.ಗಳ ಯೋಜನೆ ಮತ್ತು 5 ವರ್ಷಗಳ ಕಾರ್ಯಾಚರಣೆಗೆ 9 ಕೋ. ರು. ಮೀಸಲಿರಿಸಲಾಗಿದೆ. ಮಂಗಳೂರು ನಗರದ 15 ಕಡೆಗಳ ವಿವಿಧ ಜಂಕ್ಷನ್​ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್​ ವ್ಯವಸ್ಥೆ ಅಳವಡಿಸಲಾಗುತ್ತದೆ. ಪ್ರಸ್ತುತ ನಗರದ ಬಲ್ಲಾಳ್​ಬಾಗ್​, ಕೊಡಿಯಾಲಬೈಲ್​, ಬೆಸೆಂಟ್​ ಜಂಕ್ಷನ್​ಗಳಲ್ಲಿ ಇದಕ್ಕೆ ಸಂಬಂಧಿಸಿದ ಉಪಕರಣಕ್ಕಾಗಿ ಕಂಬಗಳನ್ನು ಅಳವಡಿಸಲಾಗುತ್ತಿದೆ.

    ಐಟಿಎಂಎಸ್​ ಮೂಲಕ ಸಂಚಾರ ವ್ಯವಸ್ಥೆ ನಿಯಂತ್ರಣ

    ಪ್ರಸ್ತುತ ಕಮಾಂಡ್​ ಕಂಟ್ರೋಲ್​ ಸೆಂಟರ್​ನ ಎರಡನೇ ಹಂತದ ಕೆಲಸಗಳು ನಡೆಯುತ್ತಿದ್ದು, ಇದರದಲ್ಲಿ ಆರ್ಟಿಫಿಶಿಯಲ್​ ಇಂಟಲಿಜೆನ್ಸ್​, ಬ್ಯಾಕ್​ ಅಂಡ್​ ಪ್ರೋಗ್ರಾಮಿಂಗ್​ ಮೂಲಕ ಕಾರಿಡಾರ್​ ಮ್ಯಾನೇಜ್​ಮೆಂಟ್​ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇಂಟಲಿಜೆಂಟ್​ ಟ್ರಾಫಿಕ್​ ಮೆನೇಜ್​ಮೆಂಟ್​ ಸಿಸ್ಟಮ್​ (ಐಟಿಎಂಎಸ್​) ಮೂಲಕ ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಗೊಳ್ಳಲಿದೆ.

    ಸ್ಮಾರ್ಟ್​ಸಿಟಿ ನಗರದಲ್ಲಿ ಝೀರೋ ಟ್ರಾಫಿಕ್​ ಅಗತ್ಯವಾಗಿ ಬೇಕು. ಟ್ರಾಫಿಕ್​ ದಟ್ಟಣೆ ಇದ್ದಲ್ಲಿ ಸಿಗ್ನಲ್​ನಲ್ಲಿ ಬದಲಾವಣೆ ಮೊದಲಾದವುಗಳನ್ನು ಐಟಿಎಂಎಸ್​ ಮೂಲಕ ನಿರ್ವಹಿಸಲಾಗುತ್ತದೆ. ಇಂಟಲಿಜೆಂಟ್​ ಟ್ರಾಫಿಕ್​ ಮೆನೇಜ್​ಮೆಂಟ್​ ಸಿಸ್ಟಮ್​ (ಐಟಿಎಂಎಸ್​) ಮೂಲಕ ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಬರಲಿದೆ. ನಗರ ಸಂಚಾರ ಪೊಲೀಸರಿಗೆ ಇಂತಹ ಹೊಸ ಯೋಜನೆಗಳಿಂದ ಹೆಚ್ಚಿನ ಅನುಕೂಲವಾಗಲಿದೆ.

    > ದಿನೇಶ್​ ಕುಮಾರ್​, ಡಿಸಿಪಿ

    ನಗರ ಸಂಚಾರ ಮತ್ತು ಅಪರಾಧ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts