More

    ‘ಜಸ್ಟ್​ ಪಾಸ್​’ ಆದವರಿಗೇ ಒಂದು ಪ್ರತ್ಯೇಕ ಕಾಲೇಜ್​ …

    ಬೆಂಗಳೂರು: ‘ಗಜಾನನ ಅಂಡ್​ ಗ್ಯಾಂಗ್​’ ಖ್ಯಾತಿಯ ಶ್ರೀ ಮಹಾದೇವ್, ‘ಜಸ್ಟ್​ ಪಾಸ್​’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಓದಿದ್ದು ನೆನಪಿರಬಹುದು. ಆ ಚಿತ್ರ ಈಗ ಕೊನೆಗೂ ಸೆಟ್ಟೇರಿದೆ. ಜನವರಿ 2ರಿಂದ ಚಿತ್ರೀಕರಣ ಸಹ ಶುರುವಾಗಲಿದೆ.

    ಇದನ್ನೂ ಓದಿ: ಮೊದಲು ಸಾಬೀತು ಮಾಡಿ … ಅನುರಾಗ್ ಕಶ್ಯಪ್​​ಗೆ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕನ ಚಾಲೆಂಜ್​

    ಈ ಹಿಂದೆ ‘ತರ್ಲೆ ವಿಲೇಜ್’, ‘ಪರಸಂಗ’ ಮತ್ತು ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ಎಂ. ರಘು, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಜಸ್ಟ್ ಪಾಸ್ ಆದವರ ಮೆಂಟಾಲಿಟಿ ಬೇರೆ ಇರುತ್ತೆ. ಅವರು ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್​ ಆಗಿರುತ್ತಾರೆ. ತುಂಬಾ ತರ್ಲೆಗಳಾಗಿರುತ್ತಾರೆ. ಅವರಿಗಾಗಿಯೇ ಒಂದು ಪ್ರತ್ಯೇಕ ಕಾಲೇಜ್​ ಪ್ರಾರಂಭವಾಗಿ, ಅವರನ್ನು ಇಟ್ಟುಕೊಂಡು ಯಾವ ರೀತಿ ಶಿಕ್ಷಣ ನೀಡಲಾಗುತ್ತದೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ. ಮನರಂಜನೆಯ ಜತೆಗೆ ಒಂದೊಳ್ಳೆಯ ಸಂದೇಶ ಸಹ ಚಿತ್ರದಲ್ಲಿದೆ. ಮೈಸೂರು, ಸಕಲೇಶಪುರ, ಮಡಿಕೇರಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ.

    ನಾಯಕ ಶ್ರೀಗೆ ಕಥೆ ಕೇಳಿ ಇಷ್ಟವಾಯಿತಂತೆ. ‘ಈ ಚಿತ್ರದಲ್ಲಿ ಅರ್ಜುನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾಯಕ ನಟನಾಗಿ ಇದು ನನ್ನ ನಾಲ್ಕನೇ ಸಿನಿಮಾ. ಬಹಳ ತರ್ಲೆ, ಚೇಷ್ಟೆ ಮಾಡುವಂತ ಪಾತ್ರ ನನ್ನದು. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರೋ ಪಾತ್ರ’ ಎಂದು ಖುಷಿಪಡುತ್ತಾರೆ.

    ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಣತಿ ನಟಿಸುತ್ತಿದ್ದಾರೆ. ”ಬ್ರಹ್ಮಗಂಟು’ ಧಾರಾವಾಹಿಯಲ್ಲಿ ತಂಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನಟನೆಗೆ ನಾನು ಆಕಸ್ಮಿಕವಾಗಿ ಬಂದಿದ್ದು, ಶೃತಿ ನಾಯ್ಡು ಮೇಡಂ ನನ್ನ ಫೋಟೋ ನೋಡಿ ಸೀರಿಯಲ್​ನಲ್ಲಿ ನಟಿಸಲು ಅವಕಾಶ ನೀಡಿದರು. ಅಲ್ಲಿಂದ ನನ್ನ ಜರ್ನಿ ಆರಂಭವಾಯ್ತು. ಕಿರುತೆರೆಯಾದ ನಂತರ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇದು ನನ್ನ ಮೊದಲ ಸಿನಿಮಾ’ ಎಂದು ಖುಷಿಗುತ್ತಾರೆ.

    ಇದನ್ನೂ ಓದಿ: ‘ಮೂಲತಃ ನಮ್ಮವರೇ’ ಎನ್ನುತ್ತಿದ್ದಾರೆ ‘ಗುಳ್ಟು’ ನವೀನ್ …

    ಈ ಚಿತ್ರವನ್ನು ಶಶಿಧರ್.ಕೆ.ವಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ ಮುಂತಾದವರು ನಟಿಸುತ್ತಿದ್ದು, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

    ‘ಬೇಷರಮ್ ರಂಗ್’ ವಿವಾದದ ಬಗ್ಗೆ ‘ಕಿಂಗ್​ ಖಾನ್​’ ಹೇಳಿದ್ದೇನು ಗೊತ್ತಾ? ಇಲ್ಲಿದೆ ಶಾರೂಖ್​ ಫಸ್ಟ್​ ರಿಯಾಕ್ಷನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts