More

    ‘ಮೂಲತಃ ನಮ್ಮವರೇ’ ಎನ್ನುತ್ತಿದ್ದಾರೆ ‘ಗುಳ್ಟು’ ನವೀನ್ …

    ಬೆಂಗಳೂರು: ‘ಗುಳ್ಟು’ ನವೀನ್​ ಶಂಕರ್​ ಅಭಿನಯದ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರವು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರ ಜತೆಗೆ ಇನ್ನೊಂದೆರೆಡು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈ ಮಶ್ಯೆ, ಅವರು ‘ಮೂಲತಃ ನಮ್ಮವರೇ’ ಎಂಬ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.

    ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ರಿಷಭ್​ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

    ಕಿರಣ್ ಗೋವಿಂದರಾಜ್ ನಿರ್ಮಿಸಿ, ಚೇತನ್ ಭಾಸ್ಕರಯ್ಯ ನಿರ್ದೇಶಿಸಿರುವ ‘ಮೂಲತಃ ನಮ್ಮವರೇ’ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ಮುಗಿದಿದೆ. ಆದರೆ, ಚಿತ್ರತಂಡ ಇದುವರೆಗೂ ಚಿತ್ರದ ಬಗ್ಗೆ ಸುದ್ದಿ ಮಾಡಿರಲಿಲ್ಲ. ಈಗ ಬಿಡುಗಡೆಗೆ ಇನ್ನೇನು ಕೆಲವು ತಿಂಗಳುಗಳಿವೆ ಎನ್ನುವಾಗ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದೆ.

    ‘ಮೂಲತಃ ನಮ್ಮವರೇ’ ಚಿತ್ರದ ಕುರಿತು ಮಾತನಾಡುವ ಚೇತನ್​ ಭಾಸ್ಕರಯ್ಯ, ‘ಹಿಂದೆ ಕೆಲವು ಕಿರುಚಿತ್ರಗಳ ನಿರ್ದೇಶಿಸಿದ್ದೇನೆ‌‌. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ ಸಿದ್ದವಾದ ನಂತರ, ನಾಯಕನ‌ ಹುಡುಕಾಟದಲ್ಲಿದ್ದಾಗ ನವೀನ್ ಸಿಕ್ಕರು. ಆಗಷ್ಟೇ ಅವರ ‘ಗುಳ್ಟು’ ಚಿತ್ರ ಬಿಡುಗಡೆಯಾಗಿತ್ತು. ಇದೊಂದು ಕೌಟುಂಬಿಕ ಚಿತ್ರ. ಅಪ್ಪ-ಮಗನ ಬಾಂಧವ್ಯದ ಕುರಿತಾದ ಚಿತ್ರ. ಬೆಂಗಳೂರು ಹಾಗೂ ಕರಾವಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ‌. ನವೀನ್ ಶಂಕರ್ ಬಿಟ್ಟರೆ, ನಮ್ಮ ತಂಡದಲ್ಲಿ ಬಹುತೇಕರಿಗೆ ಇದು ಮೊದಲ ಸಿನಿಮಾ’ ಎಂದು ಹೇಳಿದರು.ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರಂತೆ.

    ಚಿತ್ರದ ಕುರಿತು ಮಾತನಾಡುವ ನವೀನ್​, ‘ಈ ತಂಡದವರು ಎಲ್ಲವನ್ನೂ ಸಿದ್ದಮಾಡಿಕೊಂಡು, ನಾಯಕನ ಹುಡುಕಾಟದಲ್ಲಿದ್ದರು. ಕೆಲವು ನಾಯಕರನ್ನು ಸಂಪರ್ಕ ಕೂಡ ಮಾಡಿದ್ದರು. ಆನಂತರ ಇವರಿಗೆ ನಾನು ಸಿಕ್ಕಿದೆ‌. ಕಥೆ ತುಂಬಾ ಚೆನ್ನಾಗಿದೆ. ನಾನು ಇಲ್ಲಿಯವರೆಗೂ ಮಾಡಿರದ ಕಥೆ ಎನ್ನಬಹುದು. ಅಪ್ಪ-ಮಗನ ಸೆಂಟಿಮೆಂಟ್ ಸನ್ನಿವೇಶಗಳು ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ. ಶೋಭರಾಜ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಲ್ಲಿ ಆಕ್ಷನ್, ಡ್ಯಾನ್ಸ್​ಗಳಿಗೆ ಅಷ್ಟು ಅವಕಾಶವಿರಲಿಲ್ಲ. ಈ ಚಿತ್ರದಲ್ಲಿ ಎಲ್ಲವೂ ಇದೆ’ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ನಟ ನವೀನ್ ಶಂಕರ್ ಹೇಳಿದರು.

    ಇದನ್ನೂ ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ; ‘ಪ್ರಜಾರಾಜ್ಯ’ ಟೀಸರ್​ ಬಿಡುಗಡೆ ಮಾಡಿದ ದೇವರಾಜ್​

    ‘ಮೂಲತಃ ನಮ್ಮವರೇ’ ಚಿತ್ರಕ್ಕೆ ಮುಂಬೈನ ತಾನ್ಯ ನಾಯಕಿಯಾಗಿದ್ದಾರೆ. ಮಿಕ್ಕಂತೆ ಕಿರುತೆರೆ ನಟಿ ಕಾವ್ಯಾ ರಮೇಶ್​, ಅವಿನಾಶ್, ಮಾಳವಿಕ ಅವಿನಾಶ್, ತೆಲುಗಿನ ಸತ್ಯಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಕೇರಳದ ಚಂತು ಛಾಯಾಗ್ರಹಣ, ‘ಏಕ್ ಖ್ವಾಬ್ ದಿ ಬ್ಯಾಂಡ್’ ಸಂಗೀತ ನಿರ್ದೇಶನ ಹಾಗೂ ಜುವೀನ್ ಸಿಂಗ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

    ಒಬ್ಬರಿಗೆ ನಿದ್ದೆ ಖಾಯಿಲೆ; ಇನ್ನೊಬ್ಬರಿಗೆ ಮರೆವಿನ ಖಾಯಿಲೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts