More

    ಮೊದಲು ಸಾಬೀತು ಮಾಡಿ … ಅನುರಾಗ್ ಕಶ್ಯಪ್​​ಗೆ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕನ ಚಾಲೆಂಜ್​

    ಮುಂಬೈ: ದಕ್ಷಿಣದ ಚಿತ್ರಗಳಿಂದಾಗಿ ಬಾಲಿವುಡ್​ನಲ್ಲಿ ದೊಡ್ಡ ಗಲಾಟೆ ನಡೆಯುತ್ತಿದೆ. ಕಂಟೆಂಟ್​ ವಿಷಯದಿಂದ ಹಿಡಿದು, ತಾವು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ವಿಷಯದವರೆಗೂ ಅಲ್ಲಿನ ನಿರ್ದೇಶಕರು ಮತ್ತು ನಿರ್ಮಾಪಕರ ನಡುವೆ ತಿಕ್ಕಾಟ ನಡೆಯುತ್ತಿದೆ. ಈಗ ಅಂಥದ್ದೇ ಒಂದು ಯುದ್ಧ ಅನುರಾಗ್​ ಕಶ್ಯಪ್​ ಮತ್ತು ವಿವೇಕ್​ ಅಗ್ನಿಹೋತ್ರಿ ನಡುವೆ ಶುರುವಾಗಿದೆ.

    ಇದನ್ನೂ ಓದಿ: ‘ಮೂಲತಃ ನಮ್ಮವರೇ’ ಎನ್ನುತ್ತಿದ್ದಾರೆ ‘ಗುಳ್ಟು’ ನವೀನ್ …

    ಇತ್ತೀಚೆಗಷ್ಟೇ, ದಕ್ಷಿಣದ ಚಿತ್ರಗಳ ಕುರಿತು ಅನುರಾಗ್​ ಸಮಾರಂಭವೊಂದರಲ್ಲಿ ಮಾತನಾಡಿದ್ದರು. ‘ಕಾಂತಾರ’ ಮತ್ತು ‘ಪುಷ್ಪ’ದಂತಹ ಚಿತ್ರಗಳು ಚಿತ್ರರಂಗವನ್ನು ಕೊಲ್ಲುತ್ತಿವೆ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧಗಳ ವ್ಯಕ್ತವಾಗಿದ್ದವು. ಪ್ರಮುಖವಾಗಿ, ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅನುರಾಗ್​ ಮಾತುಗಳನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ್ದ ಅನುರಾಗ್​, ವಿವೇಕ್​ ವಿರುದ್ಧ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ‘ಇದರಲ್ಲಿ ನಿಮ್ಮ ತಪ್ಪಿಲ್ಲ. ನಿಮ್ಮ ಸಿನಿಮಾಗಳ ರೀಸರ್ಚ್​ ಸಹ ನಿಮ್ಮ ಮಾತಿನಂತೆಯೇ ಇದೆ. ನಿಮ್ಮ ಹಾಗೂ ಕೆಲವು ಮಾಧ್ಯಮದವರ ಪರಿಸ್ಥತಿ ಹಾಗೆಯೇ ಇದೆ. ಮುಂದಿನ ಬಾರಿ ಮಾತನಾಡುವಾಗ ಸ್ವಲ್ಪ ರೀಸರ್ಚ್​ ಮಾಡಿಕೊಂಡು ಬನ್ನಿ’ ಎಂದು ಕಾಲೆಳೆದಿದ್ದರು.

    ಇದಕ್ಕೆ ವಿವೇಕ್​ ಅಗ್ನಿಹೋತ್ರಿ ಖಾರವಾಗಿಯೇ ಪ್ರತಿಕ್ರಿಯಿಸಿದರೆ, ತಮ್ಮ ಸಂಶೋಧನೆ ಏನಾದರೂ ಸುಳ್ಳು ಎಂದು ಪ್ರೂವ್​ ಮಾಡಿದರೆ, ಇನ್ನೊಮ್ಮೆ ಇಂಥಾ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ. ”ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕಾಗಿ ನಾನು ಮಾಡಿದ ನಾಲ್ಕು ವರ್ಷಗಳ ಸಂಶೋಧನೆ ತಪ್ಪು ಎಂದು ಸಾಬೀತು ಮಾಡಿ, ಗಿರಿಜಾ ಟಿಕ್ಕೂ, ಬಿಕೆ ಗಂಜು, ಏರ್​ಫೋರ್ಸ್​ ಕಿಲ್ಲಿಂಗ್​, ನದಿಮಾರ್ಗ್​ ಎಲ್ಲವೂ ಸುಳ್ಳು ಎಂದು ತೋರಿಸಿ. ಕಾಶ್ಮೀರಿ ಪಂಡಿತರ ಸುಮಾರು 700 ವಿಡಿಯೋಗಳು ಸುಳ್ಳು, ಅಲ್ಲಿ ಹಿಂದುಗಳನ್ನು ಸಾಯಿಸಲಿಲ್ಲ ಎಂದು ಪ್ರೂವ್​ ಮಾಡಿ. ಆಗ ನಾನು ಇನ್ನೊಮ್ಮೆ ಇಂಥ ತಪ್ಪುಗಳನ್ನು ಮಾಡುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ; ‘ಪ್ರಜಾರಾಜ್ಯ’ ಟೀಸರ್​ ಬಿಡುಗಡೆ ಮಾಡಿದ ದೇವರಾಜ್​

    ಮೊದಲು ಉತ್ತರ ವರ್ಸಸ್​ ದಕ್ಷಿಣ ಎಂದು ಶುರುವಾದ ಡಿಬೇಟ್​, ಈಗ ಎಲ್ಲೆಲ್ಲಿಗೋ ಹೋಗಿ ಮುಟ್ಟುತ್ತಿದೆ. ಮುಂದೆ ಇದು ಯಾವ ರೂಪ ಪಡೆಯುತ್ತದೋ ಮತ್ತು ಅನುರಾಗ್​ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು.

    ಒಬ್ಬರಿಗೆ ನಿದ್ದೆ ಖಾಯಿಲೆ; ಇನ್ನೊಬ್ಬರಿಗೆ ಮರೆವಿನ ಖಾಯಿಲೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts