More

    ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ

    ನವದೆಹಲಿ: ಗುರು ಮತ್ತು ಶನಿಗ್ರಹಗಳು ಅಕ್ಕಪಕ್ಕದಲ್ಲಿ ಇರುವಂತೆ ಕಾಣುವ ಅದ್ಭುತ ದೃಶ್ಯ ಡಿ. 21ರಂದು ನಭೋಮಂಡಲದಲ್ಲಿ ಗೋಚರಿಸಲಿದ್ದು, ಅದನ್ನು ಕಣ್ತುಂಬಿಕೊಳ್ಳಲು ಖಗೋಳಾಸಕ್ತರು ಸಜ್ಜಾಗಿದ್ದಾರೆ.

    ಇದು 400 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈ ಎರಡೂ ಬೃಹತ್ ಗ್ರಹಗಳು ಸಮೀಪಕ್ಕೆ ಬಂದಿರುವುದನ್ನು ಭೂಮಿಯಿಂದ ಬರಿಗಣ್ಣಿನಿಂದ ನೋಡಲು ಡಿ. 21ರಂದು ಸಾಧ್ಯವಾಗಲಿದೆ. ಅದಲ್ಲದೆ ಟೆಲಿಸ್ಕೋಪ್, ಬೈನಾಕ್ಯುಲರ್‌ನಿಂದ ನೋಡಿದರೆ ಇನ್ನಷ್ಟು ಸ್ಪಷ್ಟವಾಗಿ ಈ ಗ್ರಹಗಳ ಸಾಮೀಪ್ಯ ಗೋಚರಿಸಲಿದೆ. ಇದನ್ನೂ ಓದಿರಿ ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಅಂದು ಭೂಮಿ, ಗುರು ಮತ್ತು ಶನಿಗ್ರಹಗಳು ಒಂದೇ ನೇರದಲ್ಲಿ ಕಂಡು ಬರುತ್ತಿರುವುದು ಈ ಅಪರೂಪದ ಖಗೋಳ ಘಟನೆಗೆ ಕಾರಣ. ಪ್ರತಿ ಇಪ್ಪತ್ತು ವರ್ಷಗಳಿಗೆ ಒಮ್ಮೆ ಇವು ಸಮೀಪಕ್ಕೆ ಬರುತ್ತವಾದರೂ ಇಷ್ಟೊಂದು ಸಮೀಪಕ್ಕೆ ಬರುವುದು 400 ವರ್ಷಗಳಿಗೊಮ್ಮೆ ಮಾತ್ರ. ಈ ಹಿಂದೆ 1226ರಲ್ಲಿ ಮತ್ತು 1623ರಲ್ಲಿ ಇವು ಇಷ್ಟು ಸನಿಹಕ್ಕೆ ಬಂದಿದ್ದವು ಎನ್ನುತ್ತಾರೆ ಖಗೋಳ ತಜ್ಞರು.

    ಇದು ಒಂದು ದಿನ ಮಾತ್ರ ಗೋಚರಿಸುವಂತಹ ದೃಶ್ಯವಲ್ಲ. ಡಿಸೆಂಬರ್ ಅಂತ್ಯದವರೆಗೂ ಇದನ್ನು ಆಸಕ್ತರು ಕಣ್ತುಂಬಿಕೊಳ್ಳಬಹುದು. ಸಾಯಂಕಾಲದ ನಂತರ ನೈಋತ್ಯ ದಿಕ್ಕಿನಲ್ಲಿ ಇವು ಗೋಚರಿಸುತ್ತವೆ.

    ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

    ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

    ಹಳ್ಳಿ ಫೈಟ್​: ಈ ಊರಲ್ಲಿ ಒಂದೇ ದಿನ 125 ಜನರಿಂದ ನಾಮಪತ್ರ ಸಲ್ಲಿಕೆ, ಮಧ್ಯರಾತ್ರಿಯೂ ಕ್ಯೂ ನಿಂತ ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts