More

    ಆರ್‌ಆರ್‌ಆರ್ ಕನ್ನಡ ಅವತರಣಿಕೆಗೆ ಜೂ. ಎನ್‌ಟಿಆರ್ ಡಬ್

    ಬೆಂಗಳೂರು: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ, ಇತ್ತೀಚೆಗಷ್ಟೇ ಶೀರ್ಷಿಕೆ ಗುಟ್ಟನ್ನು ಬಿಟ್ಟುಕೊಟ್ಟಿದೆ. ‘ರುದ್ರಂ ರಣಂ ರುಧಿರಂ’ ಎಂಬುದು ಅಧಿಕೃತವಾಗಿದೆ. ಹೀಗಿರುವಾಗಲೇ ಚಿತ್ರದ ನಾಯಕರಲ್ಲಿ ಒಬ್ಬರಾದ ರಾಮ್‌ಚರಣ್ ತೇಜ ಜನ್ಮ ದಿನದ ನಿಮಿತ್ತ ಅವರ ಪಾತ್ರ ಪರಿಚಯಿಸುವ ಸಣ್ಣ ಟೀಸರ್ ನಿನ್ನೆಯಷ್ಟೇ ಐದು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಟೀಸರ್‌ನ ನಿರೂಪಣೆ ಎನ್‌ಟಿಆರ್ ಮಾಡಿದ್ದರು. ಇದೀಗ ಇನ್ನೊಂದು ವಿಚಾರ ಬಹಿರಂಗವಾಗಿದೆ. ಐದು ಭಾಷೆಗಳ ಟೀಸರ್‌ಗಳ ಪೈಕಿ ಕನ್ನಡ, ತಮಿಳು ಮತ್ತು ಕನ್ನಡ ಟೀಸರ್‌ಗೆ ಸ್ವತಃ ಜೂ. ಎನ್‌ಟಿಆರ್ ಡಬ್ ಮಾಡಿದ್ದಾರೆ.
    ‘ಅವನ್ನ ಕಂಡರೆ ಕಾಡ್ಗಿಚ್ಚು ನೆನಪಾಗುತ್ತದೆ. ಎದುರಿಗೆ ಬರಸಿಡಿಲು ಮೇಲೆ ಬಿದ್ದಂಗಾಯ್ತದೆ.. ಬಾಣ ಆಗಲಿ, ಬಂದೂಕಾಗಲಿ ಅವನ ಮಾತನ್ನೇ ಕೇಳುತ್ತದೆ. ಮನೆತನದ ಹೆಸರು ಅಲ್ಲುರಿ, ಶತ್ರುವಿಗೆ ತಲೆ ಬಗ್ಗಿಸಲ್ಲ ಮಂಡಿಯೂರಿ. ನನ್ನ ಅಣ್ಣ. ಈ ಕಾಡಿನ ಒಡೆಯ. ಅಲ್ಲುರಿ ಸೀತಾರಾಮರಾಜು..’ ಹೀಗೆ ಮೊದಲ ಬಾರಿಗೆ ಕನ್ನಡ ಭಾಷೆಗೆ ಡಬ್ ಮಾಡಿರುವ ಎನ್‌ಟಿಆರ್, ಖಡಕ್ ಡೈಲಾಗ್‌ಗಳನ್ನೇ ಹೊರಗೆಡವಿದ್ದಾರೆ.
    ಅಂದಹಾಗೆ, ಆರ್‌ಆರ್‌ಆರ್‌ನಲ್ಲಿ ರಾಮ್‌ಚರಣ್ ಮತ್ತು ಜೂ. ಎನ್‌ಟಿಆರ್ ಸಹೋದರರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಣ್ಣನಾಗಿ ರಾಮ್ ಎದುರಾದರೆ, ತಮ್ಮನಾಗಿ ಎನ್‌ಟಿಆರ್ ಇರಲಿದ್ದಾರೆ. ಈಗಾಗಲೇ ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿವೆ. ಬೇರೆ ಭಾಷೆಯ ಸಿನಿಮಾಗಳೂ ಸಹ ಕನ್ನಡಕ್ಕೆ ಡಬ್ ಆಗಿವೆ. ಇದೀಗ ರಾಜಮೌಳಿಯ ‘ಆರ್‌ಆರ್‌ಆರ್’ ಸಿನಿಮಾ ಸಹ ಕನ್ನಡೀಕರಣಗೊಂಡು ಬಿಡುಗಡೆ ಆಗಲಿದೆ. ಬಾಲಿವುಡ್ ಕಲಾವಿದರಾದ ಅಜಯ್ ದೇವಗನ್, ಆಲಿಯಾ ಭಟ್ ಸಹ ಈ ಸಿನಮಾದಲ್ಲಿದ್ದಾರೆ. ಜ.8 2021ಕ್ಕೆ ಚಿತ್ರ ತೆರೆಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts