More

    ಬಬಲೇಶ್ವರದಲ್ಲೊಬ್ಬ ಜ್ಯೂನಿಯರ್ ಭಗೀರಥ: ಬರಿಗಾಲಲ್ಲೇ ಅರವಟಿಗೆ ತುಂಬಿಸಿ ದಾಹ ತಣಿಸುತ್ತಿರುವ ಬಸಪ್ಪ!

    ವಿಜಯಪುರ: ಬಿಸಿಲೂರಿನಲ್ಲಿನ ತಾಪ ಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು ಗರಿಷ್ಟ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಜನ-ಜಾನುವಾರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರ ದಾಹ ತಣಿಸುವ ನಿಟ್ಟಿನಲ್ಲಿ ಇಲ್ಲೋರ್ವ ಮಾನವೀಯ ಕಳಕಳಿ ಮೆರೆಯುತ್ತಿದ್ದಾರೆ.

    ಬಬಲೇಶ್ವರದ ಬಸಪ್ಪ ಮರಳಪ್ಪಮನವರ ನಿತ್ಯ ದಾರಿಹೋಕರಿಗೆ ನೀರು ಕುಡಿಸುತ್ತಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಕುಡಿಯುವ ನೀರು ಪೂರೈಸುವ ಮೂಲಕ ಗಮನ ಮಾನವೀತೆ ಮೆರೆಯುತ್ತಿದ್ದಾರೆ. ಪಟ್ಟಣದ ವಿವಿಧ ಭಾಗಗಳಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಿ ಮೂರು ಹೊತ್ತು ನೀರು ತುಂಬಿಸುತ್ತಿದ್ದಾರೆ.

    ಕಳೆದ 30 ವರ್ಷಗಳಿಂದ ಈ ಸೇವೆ ಮಾಡಿಕೊಂಡು ಬಂದಿರುವ ಬಸಪ್ಪ ಪ್ರಸಕ್ತ ಬೇಸಿಗೆಯಲ್ಲೂ ನೀರ ಕಾಯಕ ಮುಂದುವರಿಸಿದ್ದಾರೆ. ಬಿಸಿಲಿನಲ್ಲಿ ಬಸವಳಿದು ಬಂದವರಿಗೆ ನೀರು ಕುಡಿಸುವುದು ಪುಣ್ಯದ ಕೆಲಸವೆಂದು ಭಾವಿ ಶ್ರದ್ಧೆಯಿಂದ ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಬರಿಗಾಲಲ್ಲಿ ನೀರು ತುಂಬಿಸುವ ಈತನ ಪವಿತ್ರ ಕಾರ್ಯಕ್ಕೆ ಬಿಜೆಪಿ ಮುಖಂಡ ಶಂಕರಗೌಡ ಬಿರಾದಾರ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts