More

    ಬಬಲೇಶ್ವರ ಪಟ್ಟಣ ಪಂಚಾಯಿತಿಯಲ್ಲಿ ಬಜೆಟ್ ಮಂಡನೆ

    ತಿಕೋಟಾ: ಬಬಲೇಶ್ವರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ತಹಸೀಲ್ದಾರ್ ಸಂತೋಷ ಮ್ಯಾಗೇರಿ ಅಧ್ಯಕ್ಷತೆಯಲ್ಲಿ 2024/2025 ನೇ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು.

    ಆಸ್ತಿ ತೆರಿಗೆ, ನೀರಿನ ಕರ, ಉದ್ದಿಮೆ- ಕಟ್ಟಡ ಪರವಾನಗಿ ಹಾಗೂ ಇತರ ಮೂಲಗಳಿಂದ 2.08 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ಪಾವತಿಗಳಾದ ರಸ್ತೆ, ಕುಡಿಯುವ ನೀರು, ಚರಂಡಿ, ಘನತ್ಯಾಜ ವಿಲೇವಾರಿ ಮತ್ತು ಉಪಕರಣ- ವಾಹನ ಖರೀದಿ ಒಳಗೊಂಡು ಇತರ ಅಭಿವೃದ್ಧಿ ಕಾರ್ಯಗಳಿಗಾಗಿ 2.05 ಕೋಟಿ ರೂ. ಮೀಸಲಿಡಲಾಗಿದೆ.

    ಬಂಡವಾಳ ಸ್ವೀಕೃತಿಯಡಿ ಸರ್ಕಾರದ ವಿವಿಧ ಯೋಜನೆಗಳ ಮೂಲದಿಂದ 1.68 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಬಂಡವಾಳ ಪಾವತಿ ಸರ್ಕಾರಿ ಯೋಜನೆಗಳ ಸುತ್ತೋಲೆಗಳಂತೆ 1.68 ಕೋಟಿ ರೂ. ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ ಎಂದು ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರುದ್ರಗೌಡ ಸೋಲಾಪುರ ತಿಳಿಸಿದ್ದಾರೆ.

    ಉಪತಹಸೀಲ್ದಾರ್ ಗಿರಿಜಾ ಸಜ್ಜನ, ನಗೇಶ ಜಂಗಮಶೆಟ್ಟಿ, ಬಸವರಾಜ ಕಾಜಿಬೆಳಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts