More

    ಜೂನ್-ಜುಲೈ ತಿಂಗಳಲ್ಲಿ ಹತ್ತಿ ಬಿತ್ತನೆ ಮಾಡಿ

    ಯಲಬುರ್ಗಾ; ರೈತರಿಗೆ ಉತ್ತಮ ಆದಾಯ ತಂದು ಕೊಡುವ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬಿತ್ತನೆ ಕಾಲಕ್ಕೆ ಸರಿಯಾಗಿ ಬೆಳೆಯಬೇಕು ಎಂದು ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಹೇಳಿದರು.

    ಇದನ್ನೂ ಓದಿ: ಈ ಪ್ರಾಣಿ ಹಾಲು ಕುಡಿದ್ರೆ ಕಣ್ಣಿನ ದೂರ ದೃಷ್ಟಿ, ಹತ್ತಿರ ದೃಷ್ಟಿ ಸಮಸ್ಯೆ ಮಾಯಾ

    ತಾಲೂಕಿನ ತಿಪ್ಪನಾಳದ ವಾಲ್ಮೀಕಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ಹತ್ತಿ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹತ್ತಿ ಬೆಳೆಯುವ ಪ್ರದೇಶ ಅಧಿಕವಿದೆ. ಇದರಿಂದ ರೈತರು ಹತ್ತಿಯಲ್ಲಿ ಉತ್ತಮ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ಮಾರ್ಚ್- ಎಪ್ರಿಲ್ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತಿತ್ತು.

    ಆದರೆ, ಈ ಬಾರಿ ಮಳೆ ಕೊರತೆಯಿಂದ ಭೂಮಿಯಲ್ಲಿ ತೇವಾಂಶ ಇಲ್ಲದ ಕಾರಣ ಬೆಳೆ ಕುಂಠಿತವಾಗುವ ಸಂಭವವಿದೆ. ಅದಕ್ಕಾಗಿ ರೈತರು ಜೂನ್-ಜುಲೈ ತಿಂಗಳಲ್ಲಿ ಹತ್ತಿ ಬಿತ್ತನೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ರೋಗಗಳ ಹತೋಟಿ, ಸಮಗ್ರ ಕೀಟಬಾಧೆ ನಿಭಾಯಿಸಬಹುದು ಎಂದು ತಿಳಿಸಿದರು.

    ಪ್ರಗತಿಪರ ರೈತರಾದ ದೇವೆಂದ್ರಗೌಡ ಗೌಡ್ರ, ಶರಣಪ್ಪ ಯಡ್ಡೋಣಿ, ವೆಂಕಟೇಶ, ಶರಣಪ್ಪ ಕಂಬಳಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದ್ಯಾಮನಗೌಡ ಕರಿಗೌಡರ, ಸಿಬ್ಬಂದಿ ಕಿರಣಕುಮಾರ, ಮಹಾಬಳೇಶ ಚಿಣಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts