More

    ಜ್ಯೂಸಿ ಗಾಸಿಪ್​, ಅಪಪ್ರಚಾರಗಳ ಸಂತ್ರಸ್ತರಾಗುತ್ತಿದ್ದಾರೆ ಜಡ್ಜ್​ಗಳು: ನ್ಯಾಯಮೂರ್ತಿ ಎನ್​.ವಿ.ರಮಣ ಕಳವಳ

    ನವದೆಹಲಿ: ಸ್ವರಕ್ಷಣೆಗಾಗಿ ಮಾತನಾಡುವುದರಿಂದ ತಮ್ಮನ್ನು ತಾವು ತಡೆಯುವ ಕಾರಣ ಜಡ್ಜ್​ಗಳು ಸೋಷಿಯಲ್ ಮೀಡಿಯಾಗಳಲ್ಲಿ ಜ್ಯೂಸಿ ಗಾಸಿಪ್​, ಅಪಪ್ರಚಾರಗಳ ಸಂತ್ರಸ್ತರಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದ್ದಾರೆ. ಭಾವಿ ಮುಖ್ಯನ್ಯಾಯಮೂರ್ತಿಗಳೆನ್ನುವ ಕಾರಣಕ್ಕೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್. ಬಾನುಮತಿ ಬರೆದ ಜುಡಿಷಿಯರಿ, ಜಡ್ಜ್ ಆ್ಯಂಡ್ ದ ಅಡ್ಮನಿಷ್ಟ್ರೇಶನ್ ಆಫ್ ಜಸ್ಟೀಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಜಡ್ಜ್​ಗಳ ಬದುಕು ಎನ್ನುವುದು ಇತರರಿಗಿಂತ ಭಿನ್ನವಾಗೇನೂ ಇಲ್ಲ. ಅವರು ದಂತದ ಮಹಲಿನಲ್ಲಿ ಐಷಾರಾಮಿ ಬದುಕನ್ನೇನೂ ಸಾಗಿಸುತ್ತಿಲ್ಲ. ಹಾಗೊಂದು ತಪ್ಪು ತಿಳಿವಳಿಕೆ ಇರುವವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ರಮಣ ಅವರು ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ತೆರಿಗೆ ವಂಚನೆ ಕೇಸ್ – ಎ.ಆರ್.ರೆಹಮಾನ್​ಗೆ ಮದ್ರಾಸ್ ಹೈಕೋರ್ಟ್ ನೋಟಿಸ್​

    ಇದೇ ಕಾರ್ಯಕ್ರಮದಲ್ಲಿ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರು ಕೂಡ ಭಾಗಿಯಾಗಿದ್ದು, ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ತದ್ವಿರುದ್ಧವಾಗಿ ತಮಗೆ ಬೇಕಾದಂತೆ, ಬಾಯಿಗೆ ಬಂದಂತೆ ಮಾತನಾಡುವುದರಿಂದ ಜನಸಾಮಾನ್ಯರನ್ನು ಯಾವ ಕಾನೂನು ತಡೆಯುತ್ತದೆಯೋ ಅದೇ ಕಾನೂನು ಜಡ್ಜ್​ಗಳ ವಾಕ್​ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಿದೆ ಎಂದು ಹೇಳಿದರು.

    ಇದನ್ನೂ ಓದಿ: 1 ರೂಪಾಯಿ ಮತ್ತು ಪ್ರಶಾಂತ್ ಭೂಷಣ್ ಅವರ ಮೊದಲ ಪ್ರತಿಕ್ರಿಯೆ!

    ಅವರಿಬ್ಬರ ಈ ಹೇಳಿಕೆಯು, ಆ್ಯಕ್ಟಿವಿಸ್ಟ್ -ಲಾಯರ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್)

    ಒಂದ್​ ರೂಪಾಯಿ ಕಟ್ಟೋದಿಲ್ಲ, ಹೊಸ ಪೀಠದಲ್ಲಿ ಕೇಸ್​ ವಿಚಾರಣೆ ನಡೆಸಿ – ಪ್ರಶಾಂತ್ ಭೂಷಣ್ ಮೇಲ್ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts