More

    ಸೋಲಿಗೆ ಕಾಂಗ್ರೆಸ್ ನ ಅಪಪ್ರಚಾರ ಕಾರಣ ಎಂದ ರೇಣುಕಾಚಾರ್ಯ

    ಹೊನ್ನಾಳಿ: ಕಾಂಗ್ರೆಸ್ ನ ಡಿ.ಜಿ.ಶಾಂತನಗೌಡ ಚುನಾವಣೆಗೂ ಮುನ್ನ ನನ್ನ ವಿರುದ್ಧ ಅಪಪ್ರಚಾರ ಮಾಡಿ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

    ತಾಲೂಕಿನ ಹನುಮಸಾಗರ ಗ್ರಾಮದ ಸಮೀಪ ಇರುವ ತುಂಗಭದ್ರಾ ನದಿ ತೀರದಲ್ಲಿ ಅಂತಿಮ ಹಂತದ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

    ರೇಣುಕಾಚಾರ್ಯ ಕಮಿಷನ್ ಒಡೆಯಲು ಕೇವಲ ಪೈಪ್‌ಗಳನ್ನು ಕೆರೆಗಳಿಗೆ ಬಿಟ್ಟಿದ್ದಾರೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಾನು ಕೇವಲ ಕಮಿಷನ್ ಪಡೆಯಲು ಕಾಮಗಾರಿ ಪ್ರಾರಂಭಿಸಿದ್ದರೆ 518 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತಕ್ಕೆ ಬರುತ್ತಿತ್ತೇ ಎಂದು ಪ್ರಶ್ನಿಸಿದರು.

    ಈ ಯೋಜನೆ ಮೂಲಕ 17 ಗ್ರಾಮಗಳ 32 ಕೆರೆಗಳಿಗೆ ಇನ್ನು ಹತ್ತು ದಿನಗಳ ಒಳಗಾಗಿ ನೀರು ಹರಿಯಲಿದೆ ಎಂದರು.

    ಮುಕ್ತಾಯ ಹಂತದಲ್ಲಿ ಕಾಮಗಾರಿ
    ಹನುಮಸಾಗರ, ಕುರುವಹಳೇದಿಬ್ಬ, ಸವಳಂಗ ಹಾಗೂ ಬೆನಕನಹಳ್ಳಿ ಗ್ರಾಮದ ಬಳಿ ಜಾಕ್‌ವೆಲ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು.

    518 ಕೋಟಿ ರೂ. ವೆಚ್ಚದಲ್ಲಿ ಹನುಮಸಾಗರ, ಗೋವಿನಕೋವಿ ಏತ ನೀರಾವರಿ ಯೋಜನೆ ಮೂಲಕ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ 108 ಕೆರೆಗಳಿಗೆ ನೀರು ಹರಿಯಲಿದ್ದು, ಬೆನಕನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 58 ಕೋಟಿ ರೂ. ವೆಚ್ಚದಲ್ಲಿ 24 ಕೆರೆಗಳಿಗೆ ನೀರು ಹರಿಯಲಿದೆ ಎಂದರು.

    ನಾನು ಮನೆಯಲ್ಲಿ ಕೂರುವುದಿಲ್ಲ
    ನಾನು ಚುನಾವಣೆಯಲ್ಲಿ ಸೋತಿರಬಹುದು ಆದರೆ ಸತ್ತಿಲ್ಲ. ನಾನು ಜನಾದೇಶಕ್ಕೆ ತಲೆ ಬಾಗುತ್ತೇನೆ ಎಂದ ರೇಣುಕಾಚಾರ್ಯ, ಸೋತಿದ್ದೇನೆಂದು ಮನೆಯಲ್ಲಿ ಕೂರುವುದಿಲ್ಲ, ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಾದ್ಯಂತ ಪ್ರವಾಸ ಮಾಡಿ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದರು.

    ಕಳೆದ ಮೂರು ದಿನಗಳಿಂದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಮುಖಂಡರು, ಕಾರ್ಯಕರ್ತರು ಬಂದು ಆತ್ಮಸ್ಥೈರ್ಯ ನೀಡುತ್ತಿದ್ದಾರೆ. ಅವಳಿ ತಾಲೂಕಿನ ಜನರು 75 ಸಾವಿರ ಮತ ನೀಡಿದ್ದು, ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್,ತಾ.ಪಂ.ಮಾಜಿ ಸದಸ್ಯೆ ಶಿವಾನಂದ್, ಗ್ರಾ.ಪಂ.ಸದಸ್ಯ ವೀರೇಶ್ ಮುಖಂಡರಾದ ಚೇತನ್, ಅನಿಲ್, ಚಂದ್ರಪ್ಪ ಕೋನಾಯ್ಕನಹಳ್ಳಿ ಮಂಜು ಸೇರಿದಂತೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts