More

    ಜ್ಯುಬಿಲಿಯೆಂಟ್ ಕಾರ್ಖಾನೆಗೆ ಕರೊನಾ ಸೋಂಕು ತಗುಲಿದ ಪ್ರಕರಣ: ತನಿಖೆಯಲ್ಲಿ ಮೂರು ಕಾರಣಗಳು ಸ್ಪಷ್ಟ

    ಮೈಸೂರು: ಇಡೀ ಜಿಲ್ಲೆಯನ್ನೇ ಆತಂಕಕ್ಕೆ ದೂಡಿದ್ದ ಜ್ಯುಬಿಲಿಯೆಂಟ್ ಕಾರ್ಖಾನೆಗೆ ಕರೊನಾ ಸೋಂಕು ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಮೂರು ಕಾರಣಗಳು ಸ್ಪಷ್ಟವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ತಬ್ಲಿಘಿ ಮಾದರಿಯ ಸಭೆ ನಡೆದಿತ್ತು. ಆ ಸಭೆಗೆ ಜ್ಯುಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ. ಇದು ಮೊದಲ ಕಾರಣವಾಗಿದೆ. ಎರಡನೇಯದ್ದು ಆಡಿಟ್​​ಗಾಗಿ ದೇಶದ ಬೇರೆ ರಾಜ್ಯದ ಕೆಲವರು ಕಾರ್ಖಾನೆಗೆ ಬಂದಿದ್ದರು. 3ನೇ ಕಾರಣ ಜ್ಯುಬಿಲಿಯೆಂಟ್ ಕಾರ್ಖಾನೆಯ ಅಧಿಕಾರಿಗಳು ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿ ಬಂದಿದ್ದಾರೆಂದು ತಿಳಿಸಿದರು.

    ಇದನ್ನೂ ಓದಿ: ಆಂಧ್ರ ಅನಿಲ ದುರಂತ: ಸೋರಿಕೆಯಾಗಿರುವುದು ಸ್ಟೈರೀನ್ ಗ್ಯಾಸ್, ಇದರಿಂದಾಗುವ ದುಷ್ಪರಿಣಾಮಗಳೇನು?​

    ಮೇಲಿನ ಈ 3 ಕಾರಣಗಳಲ್ಲಿ ಯಾವುದೋ 1 ಕಾರಣದಿಂದ ಸೋಂಕು ಬಂದಿರಬಹುದು. ಪೊಲೀಸರ ತನಿಖಾ ವರದಿಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹರ್ಷಗುಪ್ತ ಅವರ ತನಿಖಾ ವರದಿ ನನ್ನ ಕೈ ಸೇರಿಲ್ಲ. ಆದರೆ ಅವರು ತನಿಖೆಗೆ 1 ತಿಂಗಳು ತಡವಾಗಿದೆ ಎಂದು ಹೇಳಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಸೋಮಶೇಖರ್ ಹೇಳಿದರು.

    ಮಹಿಳಾ ಪಿಎಸ್​ಐಗೆ ಬೆದರಿಕೆಯೊಡ್ಡಿದ್ರಾ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ? ಮಂಗಳವಾರ ರಾತ್ರಿ ನಡೆದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts