More

    ಪಠ್ಯೇತರ ಚಟುವಟಿಕೆಗಳಿಗೆ ಪಾಶಸ್ತ್ಯ ಅಗತ್ಯ

    ಧಾರವಾಡ: ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪಾಶಸ್ತ್ಯ ನೀಡಬೇಕು ಎಂದು ಜೆ.ಎಸ್.ಎಸ್ ಕೆ.ಎಚ್. ಕಬ್ಬೂರ ಮಹಾವಿದ್ಯಾಲಯದ ಪ್ರಾಚಾರ್ಯ ವಸಂತ ದೇಸಾಯಿ ಹೇಳಿದರು.
    ನಗರದ ಜೆಎಸ್‌ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
    ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಶಾಲಾ ಮಂತ್ರಿ ಮಂಡಲದ ಪದಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
    ಜಿಮ್ನಾಸ್ಟಿಕ್ ತರಬೇತುದಾರ ವಿಠ್ಠಲ ಮರ್ತುಗುಡ್ಡೆ ಮಾತನಾಡಿ, ನಿತ್ಯ ಜೀವನದಲ್ಲಿ ಕ್ರೀಡೆಯು ಮಹತ್ವ ವಹಿಸುತ್ತದೆ. ಸೋಲು- ಗೆಲುವು ಒಂದು ನಾಣ್ಯದ ಎರಡು ಮುಖಗಳು. ಕ್ರೀಡೆಗಳಲ್ಲಿ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದರು.
    ಪ್ರಾಚಾರ್ಯೆ ಮೇನಾವತಿ ದಿವಟೆ, ರಾಜೇಶ್ವರಿ ಶೆಟ್ಟಿ, ಮಹಾವೀರ ಉಪಾಧ್ಯೆ, ಇತರರಿದ್ದರು. ಶೀತಲ್ ಕುಂದರ್ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು. ಕವಿತಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts