More

    ಕೋವಿಡ್ ಮಧ್ಯೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ನರೇಗಾ ಕೆಲಸಗಾರರಿಗೆ ಅವಕಾಶ

    ಚಿಕ್ಕಮಗಳೂರು: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಖಾಲಿ ಇರುವ ಬೇರ್ ಫೂಟ್ ಟೆಕ್ನೀಷಿಯನ್ (ಬಿಎಫ್​​ಟಿ) ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಅಜ್ಜಂಪುರ-3, ಮೂಡಿಗೆರೆ-4, ಕೊಪ್ಪ-3, ಶೃಂಗೇರಿ -1, ನರಸಿಂಹರಾಜಪುರ-2, ಚಿಕ್ಕಮಗಳೂರು-1, ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 14 ಹುದ್ದೆಗಳಿವೆ.
    ಮನರೇಗಾ ಯೋಜನೆಯಡಿ ಉದ್ಯೋಗ ಕಾರ್ಡ್ ಹೊಂದಿರುವ ಸಕ್ರಿಯ ಕೆಲಸಗಾರರು ಅಂದರೆ ಸದರಿ ವ್ಯಕ್ತಿಯ ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಕನಿಷ್ಠ 2 ಆರ್ಥಿಕ ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರರಾಗಿ ಕೆಲಸ ಮಾಡಿರಬೇಕು. ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಮಹಿಳೆಯರು, ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ ಅದ್ಯತೆ ನೀಡಲಾಗುತ್ತದೆ. ಗರಿಷ್ಠ 45 ವರ್ಷ ವಯೋಮಿತಿಯುಳ್ಳವರಾಗಿರಬೇಕು.

    ಇದನ್ನೂ ಓದಿ: ಅನ್​ಲಾಕ್ 2.0 ಮಧ್ಯೆ ಸ್ವಯಂ ರಕ್ಷಣೆ ಅತ್ಯಗತ್ಯ: ಪ್ರಧಾನಿ ಮೋದಿ

    ಅರ್ಜಿ ಸಲ್ಲಿಸಲು ಜುಲೈ 4 ರ ವರೆಗೆ ಅವಕಾಶವಿರುತ್ತದೆ. ಅರ್ಜಿ ನಮೂನೆ www.chikkamagaluru.nic.in ನಲ್ಲಿ ಲಭ್ಯವಿರುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ನೇರವಾಗಿ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ಅಭಿವೃದ್ಧಿ ಶಾಖೆ ಕೊಠಡಿ ಸಂಖ್ಯೆ 23 ಕ್ಕೆ ಸಲ್ಲಿಸಬೇಕು. 

    ಹಗ್‌ ಕರ್ಟನ್‌ ಧರಿಸಿ- ಆತಂಕವಿಲ್ಲದೇ ಪ್ರೀತಿಪಾತ್ರರನ್ನು ತಬ್ಬಿಕೊಳ್ಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts