More

    ಜೋಯಾಲುಕ್ಕಾಸ್ ನವೀಕೃತ ಮಳಿಗೆ ಉದ್ಘಾಟನೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಬಿ.ಎನ್. ರಸ್ತೆಯಲ್ಲಿ ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದಾದ ಜೋಯಾಲುಕ್ಕಾಸ್ ಜುವೆಲ್ಲರಿಯ ನವೀಕೃತ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.


    ಜಗತ್ತಿನ ಅಚ್ಚುಮೆಚ್ಚಿನ ಜೋಯಾಲುಕ್ಕಾಸ್ ತಮ್ಮ ಗ್ರಾಹಕರಿಗೆ ಆತ್ಯಾಕರ್ಷಕ ಕೊಡುಗೆಗಳೊಂದಿಗೆ ಮೈಸೂರಿನ ಆಭರಣ ಮಳಿಗೆಯನ್ನು ನವೀಕರಿಸಿದ್ದು, ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ ಹಾಗೂ ನಟಿ ಅನುಷಾ ರೈ ನವೀಕೃತ ಮಳಿಗೆಗೆ ಚಾಲನೆ ನೀಡಿದರು.


    ಮೇಯರ್ ಸುನಂದಾ ಪಾಲನೇತ್ರ ಮಾತನಾಡಿ, ಉತ್ತಮ ಚಿನ್ನಾಭರಣಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ಹೆಚ್ಚಾಗಿ ಆಕರ್ಷಿಸುತ್ತಿರುವ ಜೋಯಾಲುಕ್ಕಾಸ್ ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಿ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಿ ಎಂದರು. ಜತೆಗೆ ಜೋಯಾಲುಕ್ಕಾಸ್ ಸಂಸ್ಥೆಯ ಮಾಲೀಕರು ಮತ್ತು ಸಿಬ್ಬಂದಿ ವರ್ಗಕ್ಕೆ ಶುಭ ಕೋರಿದರು.


    ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಹೊಸದಾಗಿ ನವೀಕರಿಸಿದ ಮಳಿಗೆಯಲ್ಲಿ ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಶಾಪಿಂಗ್ ಸ್ಥಳ ವಿಶಾಲವಾಗಿದೆ.
    ಪ್ರಪಂಚದ ಅತಿದೊಡ್ಡ ಚಿನ್ನಾಭರಣಗಳ ಸಂಸ್ಥೆಯಾಗಿರುವ ಇದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಚಿನ್ನಾಭರಣ, ವಜ್ರ ಹಾಗೂ ಪ್ಲಾಟಿನಂಗಳನ್ನು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಮಳಿಗೆ ನವೀಕೃತಗೊಂಡಿರುವ ಕಾರಣ ಸೆ.6ರವರೆಗೆ ಪ್ರತಿ 50,000 ರೂ. ಮತ್ತು ಅಧಿಕ ಮೊತ್ತದ ಆಭರಣ ಖರೀದಿ ಮೇಲೆ 200 ಮೀ.ಗ್ರಾಂ. ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಲೆ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts