More

    “ಜೊತೆಜೊತೆಯಲಿ” ಅನು ಸೋಷಿಯಲ್​ ಡಿಸ್ಟೆನ್ಸಿಂಗ್​ ಬಗ್ಗೆ ಹೆಂಗ್ ಪಾಠ ಮಾಡ್ತಿದಾರೆ ನೋಡಿ..

    ಬೆಂಗಳೂರು: ಇತ್ತೀಚೆಗಷ್ಟೇ ಶ್ವಾನಗಳಿಗೆ ಆಹಾರ ನೀಡಿ ಸುದ್ದಿಯಾಗಿದ್ದ “ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಅನು ಸಿರಿಮನೆ ಅಲಿಯಾಸ್​ ಮೇಶ್ರೀ ಈಗ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಮನೆ ಮನೆಗೂ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಬಗ್ಗೆ ಜನರಿಗೆ ಪಾಠ ಮಾಡುತ್ತಿದ್ದಾರೆ.
    ಕರೊನಾ ಹರಡುವಿಕೆಯ ಬಗ್ಗೆ ಈಗಲೂ ಕೆಲವೊಂದಿಷ್ಟು ಮಂದಿಗೆ ಗೊತ್ತಿಲ್ಲ. ಬೇಜವಾಬ್ದಾರಿ ಜೀವನ ನಡೆಸುತ್ತಿದ್ದಾರೆ. ಶುಚಿತ್ವ ಕಾಪಾಡುಕೊಳ್ಳುವಿಕೆಯಲ್ಲೂ ಹಿಂದುಳಿಯುತ್ತಿದ್ದಾರೆ. ಹಾಗಾಗಿ ಅದರ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ನಟಿ ಮೇಶ್ರೀ ನಂದಿನಿ ಲೇಔಟ್​ನಲ್ಲಿನ ಮನೆಗಳಿಗೆ ತೆರಳಿ ಕರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
    ನಂದಿನಿ ಲೇಔಟ್​ ಸುತ್ತಮುತ್ತಲಿನ ಏರಿಯಾಗಳಲ್ಲಿ ಕೆಲಸ ಮಾಡುವ ಪೌರಕಾಮಿರ್ಕರೊಂದಿಗೆ ಒಂದಷ್ಟು ಹೊತ್ತು ಕಾಲಕಳೆದು, ಅವರಿಗ ಊಟ, ಹಾಲು, ಸೋಪು, ಮಾಸ್ಕ್​ ರೀತಿಯ ಅವಶ್ಯಕ ಸಾಮಗ್ರಿಗಳನ್ನು ನೀಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಿಂದ ಏನೆಲ್ಲ ಆಗುತ್ತದೆ ಎಂಬುದನ್ನೂ ಮನವರಿಕೆ ಮಾಡಿಕೊಟ್ಟಿದ್ದಾರೆ.
    “ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಿಂದ ಮಾತ್ರ ನಿಯಂತ್ರಿಸಲು ಸಾಧ್ಯ. ದಿನಕ್ಕೆ ಹಲವು ಬಾರಿ ಕೈ ಶುಚಿಯಾಗಿಟ್ಟುಕೊಳ್ಳುವುದು ಮತ್ತು ಮುಖಕ್ಕೆ ಮಾಸ್ಕ್​ ಧರಿಸುವುದರಿಂದ ಕರೊನಾ ಬರುವುದಿಲ್ಲ’ ಎಂದು ಪೌರಕಾರ್ಮಿಕರಿಗೆ ಮತ್ತು ಆ ಭಾಗದ ಜನರಿಗೆ ಪಾಠ ಮಾಡಿದ್ದಾರೆ.

    "ಜೊತೆಜೊತೆಯಲಿ" ಅನು ಸೋಷಿಯಲ್​ ಡಿಸ್ಟೆನ್ಸಿಂಗ್​ ಬಗ್ಗೆ ಹೆಂಗ್ ಪಾಠ ಮಾಡ್ತಿದಾರೆ ನೋಡಿ.. "ಜೊತೆಜೊತೆಯಲಿ" ಅನು ಸೋಷಿಯಲ್​ ಡಿಸ್ಟೆನ್ಸಿಂಗ್​ ಬಗ್ಗೆ ಹೆಂಗ್ ಪಾಠ ಮಾಡ್ತಿದಾರೆ ನೋಡಿ.. "ಜೊತೆಜೊತೆಯಲಿ" ಅನು ಸೋಷಿಯಲ್​ ಡಿಸ್ಟೆನ್ಸಿಂಗ್​ ಬಗ್ಗೆ ಹೆಂಗ್ ಪಾಠ ಮಾಡ್ತಿದಾರೆ ನೋಡಿ.. "ಜೊತೆಜೊತೆಯಲಿ" ಅನು ಸೋಷಿಯಲ್​ ಡಿಸ್ಟೆನ್ಸಿಂಗ್​ ಬಗ್ಗೆ ಹೆಂಗ್ ಪಾಠ ಮಾಡ್ತಿದಾರೆ ನೋಡಿ.. "ಜೊತೆಜೊತೆಯಲಿ" ಅನು ಸೋಷಿಯಲ್​ ಡಿಸ್ಟೆನ್ಸಿಂಗ್​ ಬಗ್ಗೆ ಹೆಂಗ್ ಪಾಠ ಮಾಡ್ತಿದಾರೆ ನೋಡಿ..

     

     

    ಕರೊನಾ ಹಿನ್ನೆಲೆ; ಆರೆಸ್ಸೆಸ್​ಗೆ “ಅಮೂಲ್ಯ’ ಕೊಡುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts