More

    ಡಿ. 30ಕ್ಕೆ ನಾಲ್ಕರ ಜತೆಗೆ ಇನ್ನೊಂದು; ಈ ಚಿತ್ರಕ್ಕೆ ಕಥೆಯೇ ಹೀರೋ …

    ಬೆಂಗಳೂರು: ಈಗಾಗಲೇ ಡಿ. 30ಕ್ಕೆ ‘ಪದವಿ ಪೂರ್ವ’, ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’, ‘ನಾನು ಅದು ಮತ್ತು ಸರೋಜ’ ಮತ್ತು ‘ಮೇಡ್​ ಇನ್​ ಬೆಂಗಳೂರು’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈಗ ಈ ಚಿತ್ರಗಳ ಸಾಲಿಗೆ ಇನ್ನೊಂದು ಸಹ ಸೇರ್ಪಡೆಯಾಗಿದೆ. ಅದೇ ‘ಜೋರ್ಡನ್​’.

    ಇದನ್ನೂ ಓದಿ: 6 ರಥ, 13 ದಿನ, 7000 ಕಿಮೀ … ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆಗೆ 20ಕ್ಕೆ ಚಾಲನೆ

    ಡಿ. 30ಕ್ಕೆ ನಾಲ್ಕರ ಜತೆಗೆ ಇನ್ನೊಂದು; ಈ ಚಿತ್ರಕ್ಕೆ ಕಥೆಯೇ ಹೀರೋ …‘ಜೋರ್ಡನ್​’ ಚಿತ್ರವನ್ನು ವಿನೋದ್​ ದಯಾಳನ್ನು ನಿರ್ದೇಶಿಸಿದ್ದು, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಹೇಂದ್ರ ಪ್ರಸಾದ್ ಮತ್ತು ‘ಕವಲು ದಾರಿ’ ಖ್ಯಾತಿಯ ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್​ ಇತ್ತೀಚೆಗೆ ಬಿಡುಗಡೆಯಾಗಿದೆ.

    ಅಮೆರಿಕಾದ ಖ್ಯಾತ ಬಾಸ್ಕೆಟ್​ ಬಾಲ್​ ಆಟಗಾನ್​ ಮೈಕಲ್ ಜೋರ್ಡನ್​ ಈ ಚಿತ್ರಕ್ಕೆ ಸ್ಫೂರ್ತಿಯಂತೆ. ಈ ಕುರಿತು ಮಾತನಾಡುವ ನಿರ್ದೇಶಕ ವಿನೋದ್​, ‘ಜೋರ್ಡನ್ ಅವರ ಮಾತಿನಿಂದ ಪ್ರೇರಣೆಯಾಗಿ ಈ ಚಿತ್ರ ಮಾಡಿದ್ದೇನೆ. ‘ಪ್ರತಿಯೊಬ್ಬರೂ ಯಾವುದಾದರೂ ವಿಷಯದಲ್ಲಿ ವಿಫಲರಾಗುತ್ತಾರೆ. ಆದರೆ, ಪ್ರಯತ್ನ ಪಡದೇ ವೈಫಲ್ಯವನ್ನು ನಾನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಇಲ್ಲಿ ಕಥೆಯೇ ಹೀರೋ. ಇದು ನನ್ನ ಮೊದಲ ಸಿನಿಮಾ. ಇದೊಂದು ಕಂಟೆಂಟ್​ ಇರುವ ಸಿನಿಮಾ’ ಎನ್ನುತ್ತಾರೆ.

    ಈ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ಕೊಟ್ಟಿದ್ದಕ್ಕೆ ಚಿತ್ರತಂಡದವರಿಗೆ ಥ್ಯಾಂಕ್ಸ್​ ಎನ್ನುವ ಸಂಪತ್​, ‘ನನ್ನ ಸ್ನೇಹಿತರೊಬ್ಬರ ಮೂಲಕ ಈ ಸಿನಿಮಾ ನನಗೆ ಸಿಕ್ಕಿತು. ತುಂಬಾ ಒಳ್ಳೆಯ ಕಂಟೆಂಟ್​ ಇರುವ ಸಿನಿಮಾ. ಎಲ್ಲರೂ ಈ ಸಿನಿಮಾ ನೋಡುವ ಮೂಲಕ ಹೊಸ ವರ್ಷ ಆಚರಣೆ ಮಾಡಿ ಪ್ರೋತ್ಸಾಹಿಸಿ’ ಎಂದು ಕೇಳಿಕೊಂಡರು.

    ಇದನ್ನೂ ಓದಿ: ಸೆನ್ಸಾರ್​ನಿಂದ ಗ್ರೀನ್​ ಸಿಗ್ನಲ್​; ಜನವರಿ 6ಕ್ಕೆ ಬಿಡುಗಡೆಯಾಗಲಿದೆ ‘ವೈಶಂಪಾಯನ ತೀರ’

    ನೋ ನಾನ್ಸೆನ್ಸ್ ಕ್ರಿಯೇಷನ್ಸ್ ಬ್ಯಾನರ್​ನಡಿ ಜೆ. ಜಾನಕಿರಾಮ್ ಮತ್ತು ಎನ್.ಆರ್.ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಸಾಯಿ ಸರ್ವೇಶ್ ಅವರ ಸಂಗೀತವಿದೆ.

    ಈ ವರ್ಷ ಯಾವ ಚಿತ್ರದ ಗಳಿಕೆ ಎಷ್ಟು? ಇಲ್ಲಿದೆ ಟಾಪ್​ 5 ಪಟ್ಟಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts