ದೇಶದ ಭವ್ಯ ಭವಿಷ್ಯಕ್ಕಾಗಿ ಎನ್​ಡಿಎ ಮೈತ್ರಿಕೂಟ ಸೇರಿದೆ: ಅಜಿತ್​ ಪವಾರ್​

Ajit Pawar
Published on

ಮುಂಬೈ: ನಾನು ಭಾರತ ಹಾಗೂ ಮಹಾರಾಷ್ಟ್ರದ ಭವ್ಯ ಭವಿಷ್ಯಕ್ಕಾಗಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸೇರಿದ್ದೇನೆ ಎಂದು ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಹೇಳಿದ್ದಾರೆ.

ಭಾನುವಾರ ಬಾರಾಮತಿಯಲ್ಲಿ ಸಮಾವೇಶವನ್ನುದ್ಧೇಶಿಸಿ ಮಾತನಾಡುವ ವೇಳೆ ರಾಜಕೀಯದಲ್ಲಿ ಯಾರು ಮಿತ್ರರು ಅಲ್ಲ ಶತ್ರುಗಳಲ್ಲ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದರು.

Ajit Pawar

ಸೋಮವಾರ ಮರಾಠವಾಡ ಪ್ರಾಂತ್ಯದಲ್ಲಿ ಎನ್​ಸಿಪಿ ಸಮಾವೇಶವನ್ನುದ್ಧೇಶಿಸಿ ಮಾತನಾಡಿದ ಅಜಿತ್​ ಪವಾರ್​ ನಾನು ಭಾರತದ ಹಾಗೂ ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದೇನೆ. ನಮ್ಮ ಮುಂದಿರುವ ಏಕೈಕ ವಿಷಯವೆಂದರೆ ಅದು ರಾಜ್ಯದ ಅಭಿವೃದ್ದಿ ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವ ಎಂದು ಹೇಳಿದ್ದಾರೆ.

ನನ್ನ ನೀತಿಗಳು ಹಾಗೂ ಕಾರ್ಯಗಳು ಸದಾ ಅಭಿವೃದ್ದಿಯ ದಿಕ್ಕಿನಲ್ಲಿ ಸಾಗುತ್ತವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಸಮಾವೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net